ಮನೆ ಖರೀದಿ: ಕಾರ್ಪೆಟ್‌ ಏರಿಯಾ ಮಿತಿ ಹೆಚ್ಚಳ

0
32

ಪ್ರಧಾನಮಂತ್ರಿ ಆವಾಸ್‌ ಯೋಜನೆ (ನಗರ) ಅಡಿ ಗೃಹಸಾಲದ ಮೇಲೆ ನೀಡಲಾಗುವ ಸಬ್ಸಿಡಿ ನಿಯಮಾವಳಿಗಳನ್ನು ಸರ್ಕಾರ ಸಡಿಲಿಸಿದೆ.

ನವದೆಹಲಿ: ಪ್ರಧಾನಮಂತ್ರಿ ಆವಾಸ್‌ ಯೋಜನೆ (ನಗರ) ಅಡಿ ಗೃಹಸಾಲದ ಮೇಲೆ ನೀಡಲಾಗುವ ಸಬ್ಸಿಡಿ ನಿಯಮಾವಳಿಗಳನ್ನು ಸರ್ಕಾರ ಸಡಿಲಿಸಿದೆ.

ಗೃಹಸಾಲದ ಬಡ್ಡಿ ಮೇಲೆ ಸಬ್ಸಿಡಿ ಪಡೆಯಲು ನಿಗದಿಗೊಳಿಸಲಾಗಿದ್ದ ಮನೆಯ ಒಳಾಂಗಣ ವಿಸ್ತೀರ್ಣ (ಕಾರ್ಪೆಟ್‌ ಏರಿಯಾ) ಮಿತಿಯನ್ನು ಸಡಿಲಗೊಳಿಸಿದ್ದು, ಶೇ 33ರಷ್ಟು ಹೆಚ್ಚಿಸಿದೆ.

ಯೋಜನೆ ಜಾರಿಯಾದ 2017ರ ಜನವರಿ 1ರಿಂದಲೇ ಪೂರ್ವಾನ್ವಯವಾಗುವಂತೆ ಹೊಸ ನಿಯಮಾವಳಿಗಳು ಜಾರಿಯಾಗಲಿವೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.

 ಮಧ್ಯಮ ಆದಾಯ ಗುಂಪಿನ (ಎಂಐಜಿ–l) ಕಾರ್ಪೆಟ್‌ ಏರಿಯಾ ಮಿತಿಯನ್ನು 120 ಚದರ ಅಡಿಯಿಂದ 160 ಚದರ ಅಡಿಗೆ ಮತ್ತು ಎಂಐಜಿ–ll ರ ಮಿತಿಯನ್ನು 150 ಚದರ ಅಡಿಯಿಂದ 200 ಚದರ ಅಡಿಗೆ ಹೆಚ್ಚಿಸಲಾಗಿದೆ.

 

2.35 ಲಕ್ಷ ಗರಿಷ್ಠ ಬಡ್ಡಿ ಸಹಾಯಧನ

4% ಎಂಐಜಿ–1 ಫಲಾನುಭವಿಗಳಿಗೆ ದೊರೆಯುವ ಬಡ್ಡಿ ಸಹಾಯಧನ

3% ಎಂಐಜಿ–2 ಫಲಾನುಭವಿಗಳಿಗೆ ದೊರೆಯುವ ಬಡ್ಡಿ ಸಹಾಯಧನ