ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಬಿಕ್ಕಟ್ಟು: ಇರಾನ್​ ವಾಯು ಪ್ರದೇಶದಲ್ಲಿ ಹಾರದಂತೆ ಅಮೆರಿಕ ವಿಮಾನಗಳಿಗೆ ಸೂಚನೆ

0
25

ಅಮೆರಿಕದ ಗೂಢಚಾರ ಡ್ರೋಣ್​ ಅನ್ನು ಇರಾನ್​ ಸೇನೆ ಹೊಡೆದುರುಳಿಸಿದ ಹಿನ್ನೆಲೆಯಲ್ಲಿ ಇರಾನ್​ ವಾಯು ಪ್ರದೇಶ, ಪರ್ಷಿಯನ್​ ಕೊಲ್ಲಿ ಮತ್ತು ಒಮನ್​ ಕೊಲ್ಲಿ ಪ್ರದೇಶದಲ್ಲಿ ಹಾರಾಟ ನಡೆಸದಂತೆ ಅಮೆರಿಕದ ವಿಮಾನಗಳಿಗೆ ನಿಷೇಧ ಹೇರಲಾಗಿದೆ.

ವಾಷಿಂಗ್ಟನ್​: ಅಮೆರಿಕದ ಗೂಢಚಾರ ಡ್ರೋಣ್​ ಅನ್ನು ಇರಾನ್​ ಸೇನೆ ಹೊಡೆದುರುಳಿಸಿದ ಹಿನ್ನೆಲೆಯಲ್ಲಿ ಇರಾನ್​ ವಾಯು ಪ್ರದೇಶ, ಪರ್ಷಿಯನ್​ ಕೊಲ್ಲಿ ಮತ್ತು ಒಮನ್​ ಕೊಲ್ಲಿ ಪ್ರದೇಶದಲ್ಲಿ ಹಾರಾಟ ನಡೆಸದಂತೆ ಅಮೆರಿಕದ ವಿಮಾನಗಳಿಗೆ ನಿಷೇಧ ಹೇರಲಾಗಿದೆ.

ಅಮೆರಿಕ ಮತ್ತು ಇರಾನ್​ ನಡುವೆ ರಾಜಕೀಯ ಬಿಕ್ಕಟ್ಟು ಉಲ್ಬಣಿಸಿದೆ. ಜತೆಗೆ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಮಿಲಿಟರಿ ಚಟುವಟಿಕೆಗಳು ತೀವ್ರವಾಗಿವೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಅಮೆರಿಕದ ನಾಗರಿಕ ವಿಮಾನಗಳ ಹಾರಾಟದ ಮೇಲೆ ಅಪಾಯದ ಕರಿನೆರಳು ಆವರಿಸಿದೆ. ಈ ಹಿನ್ನೆಲೆಯಲ್ಲಿ ಇರಾನ್​ ವಾಯು ಪ್ರದೇಶ ಮತ್ತು ಪರ್ಷಿಯನ್​ ಕೊಲ್ಲಿ ಮತ್ತು ಒಮನ್​ ಕೊಲ್ಲಿ ಪ್ರದೇಶದಲ್ಲಿ ಹಾರಾಟ ನಡೆಸದಂತೆ ಅಮೆರಿಕದ ವಿಮಾನಗಳಿಗೆ ನಿಷೇಧ ಹೇರಿ ಅಮೆರಿಕದ ಫೆಡರಲ್​ ಏವಿಯೇಷನ್​ ಅಡ್ಮಿನಿಸ್ಟ್ರೇಷನ್​ ಆದೇಶ ಹೊರಡಿಸಿದೆ.

ಅಮೆರಿಕ ವಾಯುಪಡೆಯ ಗೂಢಚಾರಿಕೆ ಡ್ರೋಣ್​ ಆರ್​ಕ್ಯೂ-4ಎ ಗ್ಲೋಬಲ್​ ಹಾಕ್​ ಅನ್ನು ಇರಾನ್​ನ ರೆವೊಲುಷನರಿ ಗಾರ್ಡ್​ ಸೇನೆ ಜೂನ್​ 19 ರಂದು ಹೊಡೆದುರುಳಿಸಿತ್ತು.

ಇರಾನ್​ ವಾಯು ಗಡಿಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಅಮೆರಿಕದ ಡ್ರೋಣ್​ ಅನ್ನು ಹೊಡೆದುರುಳಿಸಲಾಗಿದೆ ಎಂದು ಇರಾನ್​ ತಿಳಿಸಿದೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕ ಅಂತಾರಾಷ್ಟ್ರೀಯ ವಾಯು ಪ್ರದೇಶದಲ್ಲಿ ಹಾರಾಟ ನಡೆಸುತ್ತಿದ್ದ ಡ್ರೋಣ್​ ಮೇಲೆ ಇರಾನ್​ ಪ್ರಚೋದನೆ ಇಲ್ಲದೆ ದಾಳಿ ನಡೆಸಿದೆ ಎಂದು ತಿಳಿಸಿದೆ. (ಏಜೆನ್ಸೀಸ್​)