ಮದ್ಯ ಸೇವನೆ ಭಾರತದಲ್ಲಿ ಶೇ 38 ಹೆಚ್ಚಳ :

0
16

ಭಾರತದಲ್ಲಿ ವಾರ್ಷಿಕ ಮದ್ಯ ಸೇವನೆ ಪ್ರಮಾಣ 2010ರಿಂದ 2017ರ ವರೆಗೆ ಶೇ. 38 ಏರಿಕೆಯಾಗಿದೆ ಎಂದು ಅಂತಾರಾಷ್ಟ್ರೀಯ ಅಧ್ಯಯನ ವರದಿಯೊಂದು ತಿಳಿಸಿದೆ. ಲ್ಯಾನ್ಸೆಟ್ ಜರ್ನಲ್​ನಲ್ಲಿ ಪ್ರಕಟಗೊಂಡ ವರದಿ ಪ್ರಕಾರ, 1990ರ ಬಳಿಕ ಜಾಗತಿಕ ಮಟ್ಟದಲ್ಲಿ ಮದ್ಯ ಸೇವನೆ ಪ್ರಮಾಣ ಶೇ. 70 ಏರಿಕೆ ಕಂಡಿದೆ. 189 ದೇಶಗಳಲ್ಲಿ ಅಧ್ಯಯನ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ.

ಬರ್ಲಿನ್ (ಪಿಟಿಐ): ಜಾಗತಿಕ ಮಟ್ಟದಲ್ಲಿ ಮದ್ಯ ಸೇವನೆ ಕುರಿತು ಜರ್ಮನಿಯ ಡ್ರೆಸ್ಡನ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿರುವ ಅಧ್ಯಯನ ವರದಿ ‘ದಿ ಲಾನ್ಸೆಟ್ ಜರ್ನಲ್‌’ನಲ್ಲಿ ಪ್ರಕಟವಾಗಿದೆ. 2025ರ ಹೊತ್ತಿಗೆ ಜಾಗತಿಕವಾಗಿ ಮದ್ಯ ಸೇವನೆ ಪ್ರಮಾಣವನ್ನು ಶೇ 10ರಷ್ಟು ಕಡಿಮೆ ಮಾಡಲು ವಿಶ್ವಸಂಸ್ಥೆ ಗುರಿ ಇರಿಸಿಕೊಂಡಿದೆ. ಆದರೆ ಈಗಿನ ಸ್ಥಿತಿ ಗಮನಿಸಿದರೆ ಈ ಗುರಿ ತಲುಪುವುದು ಅಸಾಧ್ಯ ಎಂದು ಸಂಶೋಧಕರು ಈ ವರದಿಯಲ್ಲಿ ಹೇಳಿದ್ದಾರೆ.

ಭಾರತದಲ್ಲಿ ವಾರ್ಷಿಕ ಮದ್ಯ ಸೇವನೆ ಪ್ರಮಾಣ 2010ರಿಂದ 2017ರ ವರೆಗೆ ಶೇ. 38 ಏರಿಕೆಯಾಗಿದೆ ಎಂದು ಅಂತಾರಾಷ್ಟ್ರೀಯ ಅಧ್ಯಯನ ವರದಿಯೊಂದು ತಿಳಿಸಿದೆ. ಲ್ಯಾನ್ಸೆಟ್ ಜರ್ನಲ್​ನಲ್ಲಿ ಪ್ರಕಟಗೊಂಡ ವರದಿ ಪ್ರಕಾರ, 1990ರ ಬಳಿಕ ಜಾಗತಿಕ ಮಟ್ಟದಲ್ಲಿ ಮದ್ಯ ಸೇವನೆ ಪ್ರಮಾಣ ಶೇ. 70 ಏರಿಕೆ ಕಂಡಿದೆ. 189 ದೇಶಗಳಲ್ಲಿ ಅಧ್ಯಯನ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ.

2010ರಿಂದ 2017ರ ಅವಧಿಯಲ್ಲಿ ಭಾರತದಲ್ಲಿ ಮದ್ಯ ಸೇವನೆಯ ಪ್ರಮಾಣ ಗಮನಾರ್ಹ ಏರಿಕೆ ಕಂಡಿದೆ. ವಾರ್ಷಿಕವಾಗಿ ಪ್ರತಿ ವಯಸ್ಕ ಸೇವಿಸುತ್ತಿದ್ದ ಮದ್ಯದ ಪ್ರಮಾಣ 4.3 ಲೀಟರ್​ನಿಂದ 5.9 ಲೀಟರ್​ಗೆ ಏರಿಕೆಯಾಗಿದೆ. ಆದರೆ ಇದೇ ಅವಧಿಯಲ್ಲಿ ಅಮೆರಿಕದಲ್ಲಿ ಪ್ರತಿ ವಯಸ್ಕ ಸೇವಿಸುತ್ತಿದ್ದ ಮದ್ಯದ ಪ್ರಮಾಣ 9.3 ಲೀಟರ್​ನಿಂದ 9.8 ಲೀಟರ್​ಗೆ ಏರಿಕೆಯಾಗಿದೆ. ಚೀನಾದಲ್ಲಿ ಇದು 7.1 ಲೀಟರ್​ನಿಂದ 7.4 ಲೀಟರ್​ಗೆ ಏರಿಕೆಯಾಗಿದೆ. ಭಾರತದಲ್ಲಿ ಕಂಡುಬರುತ್ತಿರುವ ಜನಸಂಖ್ಯೆ ಏರಿಕೆಯೂ ಮದ್ಯ ಸೇವನೆ ಪ್ರಮಾಣ ಹೆಚ್ಚಾಗಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಹಿಂದುಳಿದ ಹಾಗೂ ಮುಂದುವರಿಯುತ್ತಿರುವ ದೇಶಗಳಲ್ಲಿ ಮದ್ಯ ಸೇವನೆ ಪ್ರಮಾಣ ನಿರಂತರವಾಗಿ ಏರಿಕೆಯಾಗುತ್ತಿದೆ.

ವರದಿಯ ಮುಖ್ಯ ಅಂಶಗಳು 

#  ಮದ್ಯ ಸೇವನೆಯಿಂದ ನಿರ್ದಿಷ್ಟವಾಗಿ ಸಾಂಕ್ರಾಮಿಕ ರೋಗಗಳು ಸೇರಿದಂತೆ 200ಕ್ಕೂ ಹೆಚ್ಚು ರೋಗಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ.  

# 1990ಕ್ಕೂ ಮೊದಲು, ಹೆಚ್ಚು ಆದಾಯವಿರುವ ದೇಶಗಳಲ್ಲಿಯೇ ಮದ್ಯ ಸೇವನೆ ಪ್ರಮಾಣ ಅಧಿಕವಾಗಿ ಇರುತ್ತಿತ್ತು. ಯುರೋಪ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು. 

#  ನಂತರದಲ್ಲಿ ಪರಿಸ್ಥಿತಿ ಬದಲಾಗಿದ್ದು, ಭಾರತ, ಚೀನಾ, ವಿಯೆಟ್ನಾಂ ಸೇರಿದಂತೆ ಕಡಿಮೆ ಹಾಗೂ ಮಧ್ಯಮ ಪ್ರಮಾಣದ ಆದಾಯವಿರುವ ರಾಷ್ಟ್ರಗಳಲ್ಲಿ ಮದ್ಯ ಸೇವನೆ ಪ್ರಮಾಣ ಹೆಚ್ಚಳವಾಗುತ್ತಿದೆ.

# ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಗ್ಲೋಬಲ್ ಬರ್ಡನ್ ಆಫ್ ಡಿಸೀಸ್‌ ಅಧ್ಯಯನದ ಮಾಹಿತಿ ಆಧರಿಸಿ ತಲಾವಾರು ಮದ್ಯ ಸೇವನೆ ಪ್ರಮಾಣ ಲೆಕ್ಕ ಹಾಕಲಾಗಿದೆ.