ಮತ್ತೆ ಸರಕಾರದ ಸುಪರ್ದಿಗೆ ಗೋಕರ್ಣ ದೇಗುಲ

0
17

ಗೋಕರ್ಣದ ಐತಿಹಾಸಿಕ ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಮಾಡಿ ರಾಜ್ಯ ಸರಕಾರ 2008ರ ಆ.12ರಂದು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ಶುಕ್ರವಾರ ರದ್ದುಗೊಳಿಸಿದೆ. ಜತಗೆ, ದೇವಾಲಯವನ್ನು ಅಧಿಸೂಚಿತ ಪಟ್ಟಿಯಿಂದ ಕೈ ಬಿಟ್ಟಿದ್ದ ಆದೇಶವನ್ನೂ ಅನೂರ್ಜಿತಗೊಳಿಸಿದೆ.

ಉತ್ತರಕನ್ನಡ : ಗೋಕರ್ಣದ ಐತಿಹಾಸಿಕ  ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಮಾಡಿ ರಾಜ್ಯ ಸರಕಾರ 2008ರ ಆ.12ರಂದು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ಆಗಸ್ಟ್ 10 ರ ಶುಕ್ರವಾರ ರದ್ದುಗೊಳಿಸಿದೆ. ಜತಗೆ, ದೇವಾಲಯವನ್ನು ಅಧಿಸೂಚಿತ ಪಟ್ಟಿಯಿಂದ ಕೈ ಬಿಟ್ಟಿದ್ದ ಆದೇಶವನ್ನೂ ಅನೂರ್ಜಿತಗೊಳಿಸಿದೆ. 

ದೇವಾಲಯದ ಆಡಳಿತವನ್ನು ನೋಡಿಕೊಳ್ಳಲು ಉತ್ತರ ಕನ್ನಡ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆಗೆ ಆದೇಶ ನೀಡಿದ್ದು, ಸೆ.10ರ ನಂತರ ಸಮಿತಿ ಅಸ್ತಿತ್ವಕ್ಕೆ ಬರಲಿದೆ. 

ಶ್ರೀ ಸಂಸ್ಥಾನ ಮಹಾಬಲೇಶ್ವರ ದೇವರು ಟ್ರಸ್ಟ್‌ ಮತ್ತು ಕಾರವಾರದ ಬಾಲಚಂದ್ರ ವಿಘ್ನೇಶ್ವರ್‌ ದೀಕ್ಷಿತ್‌ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಇತರೆ ತಕಾರರು ಅರ್ಜಿಗಳನ್ನು ಆಲಿಸಿದ ನ್ಯಾ. ಬಿ.ವಿ.ನಾಗರತ್ನ ಹಾಗೂ ನ್ಯಾ.ಅರವಿಂದ್‌ ಕುಮಾರ್‌ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ಆದೇಶ ನೀಡಿದೆ.