ಮಂಗಳದಲ್ಲಿ 15 ವರ್ಷ ಪೂರೈಸಿದ ಅಪಾರ್ಚುನಿಟಿ ರೋವರ್‌ (ನಾಸಾ ಕಳುಹಿಸಿರುವ ನೌಕೆ)

0
651

ಮಂಗಳ ಗ್ರಹದ ಮೇಲ್ಮೈ ಅಧ್ಯಯನಕ್ಕೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಕಳುಹಿಸಿರುವ ಅಪಾರ್ಚುನಿಟಿ ರೋವರ್‌ ನೌಕೆಯು 15 ವರ್ಷಗಳನ್ನು ಪೂರೈಸಿದೆ.

ವಾಷಿಂಗ್ಟನ್‌ (ಪಿಟಿಐ): ಮಂಗಳ ಗ್ರಹದ ಮೇಲ್ಮೈ ಅಧ್ಯಯನಕ್ಕೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ) ಕಳುಹಿಸಿರುವ ಅಪಾರ್ಚುನಿಟಿ ರೋವರ್‌ ನೌಕೆಯು 15 ವರ್ಷಗಳನ್ನು ಪೂರೈಸಿದೆ.

2018ರ ಫೆಬ್ರುವರಿಗೆ ಮೊದಲು ಅಪಾರ್ಚುನಿಟಿ ಮಂಗಳನದ ಅಂಗಳದಲ್ಲಿ 45 ಕಿ.ಮೀ ಪ್ರಯಾಣ ಮಾಡಿದೆ. ಈ ಕೆಂಪು ಗ್ರಹದಲ್ಲಿನ ಅಪಾರ ದೂಳಿನಿಂದಾಗಿ ‘ಅಪಾರ್ಚುನಿಟಿ ರೋವರ್‌’ ಕಳೆದ ವರ್ಷದ ಜೂನ್‌ನಲ್ಲಿ ಭೂಮಿಯೊಂದಿಗೆ ಸಂಪರ್ಕ ಕಳೆದುಕೊಂಡು, ಕಾರ್ಯ ಸ್ಥಗಿತಗೊಳಿಸಿದೆ ಎಂದು ನಾಸಾ ಹೇಳಿದೆ.

‘ಕೆಂಪು ಗ್ರಹದ ಮೇಲೆ ಅಪಾರ್ಚುನಿಟಿಯು ಮಹತ್ವದ ಅನ್ವೇಷಣೆ ನಡೆಸುವ ಒಂದು ಅದ್ಭುತ ಯಂತ್ರವಷ್ಟೇ ಆಗಿರಲಿಲ್ಲ. ಅದರ ಹಿಂದೆ ಅರ್ಪಣಾ ಮನೋಭಾವದ ಮತ್ತು ಪ್ರತಿಭಾನ್ವಿತರ ಒಂದು ದೊಡ್ಡ ತಂಡವೇ ಇತ್ತು. ಅದರಿಂದಾಗಿ ಬಾಹ್ಯಾಕಾಶ ಸಂಶೋಧನೆಯಲ್ಲಿ ಸಾಧ್ಯತೆಗಳನ್ನು ವಿಸ್ತರಿಸಲು ಸಾಧ್ಯವಾಯಿತು’ ಎಂದು ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬೋರೇಟರಿಯಲ್ಲಿನ (ಜೆಪಿಎಲ್) ಅಪಾರ್ಚುನಿಟಿಯ ಪ್ರಾಜೆಕ್ಟ್ ಮ್ಯಾನೇಜರ್ ಜಾನ್‌ ಕ್ಯಾಲ್ಲಸ್ ಹೇಳಿದ್ದಾರೆ.

2004ರ ಜನವರಿ 24ರಂದು ಮಂಗಳ ಗ್ರಹದ ಮೆರಿಡಿಯೆನಿ ಪ್ಲೇನಮ್‌ ಎಂದು ಕರೆಯಲಾಗುವ ಭಾಗದಲ್ಲಿ ಇಳಿದು, ಕೆಂಪು ಗ್ರಹದಿಂದ ಮೊದಲ ಸಂದೇಶವನ್ನು ಭೂಮಿಗೆ ರವಾನಿಸಿತ್ತು.