ಮಂಗಳದಲ್ಲಿ ಮೊದಲ ಹೆಜ್ಜೆ ಮಹಿಳೆಯದ್ದೇ: ನಾಸಾ

0
805

ಮಂಗಳ ಗ್ರಹದಲ್ಲಿ ಮಹಿಳೆಯೇ ಮೊದಲು ಕಾಲಿಡುವ ಸಾಧ್ಯತೆ ಇದೆ ಎಂದು ನಾಸಾ ತಿಳಿಸಿದೆ.‌

ವಾಷಿಂಗ್ಟನ್‌ (ಪಿಟಿಐ): ಮಂಗಳ ಗ್ರಹದಲ್ಲಿ ಮಹಿಳೆಯೇ ಮೊದಲು ಕಾಲಿಡುವ ಸಾಧ್ಯತೆ ಇದೆ ಎಂದು ನಾಸಾ ತಿಳಿಸಿದೆ.‌

ಮಹಿಳೆಯ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿರುವ ನಾಸಾ ಆಡಳಿತಾಧಿಕಾರಿ ಜಿಮ್‌ ಬ್ರಿಡೆನ್‌ಸ್ಟೀನ್‌, ಅಮೆರಿಕದ ಬಾಹ್ಯಾಕಾಶ ಸಂಸ್ಥೆಯ ಯೋಜನೆಗಳಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ‘ಮಂಗಳ ಗ್ರಹಕ್ಕೆ ತೆರಳುವ ಮೊದಲ ವ್ಯಕ್ತಿಯು ಮಹಿಳೆಯೇ ಆಗಿದ್ದಾರೆ’ ಎಂದು ಸಂದರ್ಶನವೊಂದರಲ್ಲಿ ಜಿಮ್‌ ಇತ್ತೀಚೆಗೆ ತಿಳಿಸಿದ್ದಾರೆ.

‘ಈ ತಿಂಗಳ ಅಂತ್ಯಕ್ಕೆ ಮಹಿಳೆಯರ ತಂಡ ಬಾಹ್ಯಾಕಾಶಕ್ಕೆ ತೆರಳಲಿದ್ದಾರೆ’ ಎಂದಿದ್ದಾರೆ.