ಮಂಗಳಕ್ಕೆ ನಾಸಾ ರೋವರ್

0
546

ಮಂಗಳ ಗ್ರಹದಲ್ಲಿನ ಸೂಕ್ಷ್ಮಾಣುಜೀವಿಗಳು, ಗ್ರಹದ ಸಂರಚನೆ ಕುರಿತ ಮಾಹಿತಿ ತಿಳಿಯಲು 2020ಕ್ಕೆ ರೋವರ್ ಉಡಾವಣೆ ಮಾಡಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಸಿದ್ಧತೆ ನಡೆಸಿದೆ. ಇದಕ್ಕೆ ಮಾರ್ಸ್ ರೋವರ್ ಮಿಷನ್ 2020 ಎಂದು ನಾಮಕರಣ ಮಾಡಲಾಗಿದೆ.

ವಾಷಿಂಗ್ಟನ್: ಮಂಗಳ ಗ್ರಹದಲ್ಲಿನ ಸೂಕ್ಷ್ಮಾಣುಜೀವಿಗಳು, ಗ್ರಹದ ಸಂರಚನೆ ಕುರಿತ ಮಾಹಿತಿ ತಿಳಿಯಲು 2020ಕ್ಕೆ ರೋವರ್ ಉಡಾವಣೆ ಮಾಡಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಸಿದ್ಧತೆ ನಡೆಸಿದೆ. ಇದಕ್ಕೆ ಮಾರ್ಸ್ ರೋವರ್ ಮಿಷನ್ 2020 ಎಂದು ನಾಮಕರಣ ಮಾಡಲಾಗಿದೆ. ಕೆಂಪು ಗ್ರಹದಲ್ಲಿರುವ ಜೆಜೆರೋ ಕುಳಿಯ ಬಳಿ ರೋವರ್ ಇಳಿಸಲಾಗುವುದು ಎಂದು ನಾಸಾ ಹೇಳಿದೆ. ಜೆಜೆರೋ ಕುಳಿ ಉಂಟಾಗಿ 3.6 ಶತಕೋಟಿ ವರ್ಷವಾಗಿರುವ ಸಾಧ್ಯತೆ ಇದೆ. ಇದರ ಬಳಿ ಸರೋವರ ಅಥವಾ ನದಿ ಮುಖಜ ಭೂಮಿ ಇರುವ ಸಾಧ್ಯತೆ ಇದೆ. ರೋವರ್ ಇಳಿಸಿ, ಮಾದರಿಗಳನ್ನು ಸಂಗ್ರಹಿಸಲು ಇದು ಪ್ರಶಸ್ತ ಸ್ಥಳವಾಗಿದೆ.

2020ರ ಜುಲೈನಲ್ಲಿ ಉಡಾವಣೆ: ಮಾರ್ಸ್ ರೋವರ್ ಮಿಷನ್ 2020ರ ಜುಲೈನಲ್ಲಿ ಉಡಾವಣೆ ಮಾಡಲಾಗುತ್ತದೆ. 2021ಕ್ಕೆ ಇದು ಮಂಗಳನ ಅಂಗಳ ತಲುಪಲಿದೆ.