ಭ್ರಷ್ಟಾಚಾರ ಪ್ರಕರಣ : ದಕ್ಷಿಣ ಕೊರಿಯ ಮಾಜಿ ಅಧ್ಯಕ್ಷ “ಲೀ ಮ್ಯುಂಗ್ ಬಾಕ್” ಗೆ 15 ವರ್ಷ ಜೈಲು

0
774

ಭ್ರಷ್ಟಾಚಾರ ಪ್ರಕರಣ ದಕ್ಷಿಣ ಕೊರಿಯ ಮಾಜಿ ಅಧ್ಯಕ್ಷ ಲೀ ಮ್ಯುಂಗ್ ಬಾಕ್ ಅವರು 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

ಸೋಲ್ : ಭ್ರಷ್ಟಾಚಾರ ಪ್ರಕರಣ ದಕ್ಷಿಣ ಕೊರಿಯ ಮಾಜಿ ಅಧ್ಯಕ್ಷ   ಲೀ ಮ್ಯುಂಗ್ ಬಾಕ್  ಅವರು 15 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

76 ವರ್ಷದ ಬಾಕ್ ಅವರು 2008 ರಿಂದ 2013 ರ ತನಕ ದಕ್ಷಿಣ ಕೊರಿಯದ ಅಧ್ಯಕ್ಷರಾಗಿದ್ದರು. ಭ್ರಷ್ಟಾಚಾರ ಹಾಗೂ ಹಣ ದುರುಪಯೋಗ ಪಡಿಸಿಕೊಂಡ ಆರೋಪದಲ್ಲಿ ಸೋಲ್ ಜಿಲ್ಲಾ ನ್ಯಾಯಾಲಯವು 15 ವರ್ಷ ಜೈಲು ಮತ್ತು 11.5 ಮಿಲಿಯನ್ ಡಾಲರ್ (85 ಕೋಟಿ ರೂ) ದಂಡ ವಿಧಿಸಿದೆ.

ಎಲ್ಲಾ ವಿಚಾರಗಳನ್ನು ಪರಿಗಣಿಸಿ ಅಪರಾಧಿಗೆ ಗರಿಷ್ಠ ಶಿಕ್ಷೆ ವಿಧಿಸಿವುದು ಅನಿವಾರ್ಯ ಎಂದು ನ್ಯಾಯಾಧೀಶರು ತಿಳಿಸಿದರು. ಅನಾರೋಗ್ಯದ ಕಾರಣ ಬಾಕ್  ಅವರು ನ್ಯಾಯಾಲಯಕ್ಕೆ ಹಾಜರಾಗಲಿಲ್ಲ

ಅಧಿಕಾರ ದುರುಪಯೋಗ, ಹಣ ದುರುಪಯೋಗ ಹಾಗೂ ಭ್ರಷ್ಟಾಚಾರ ಪ್ರಕರಣದಲ್ಲಿ ಲೀ ಅವರನ್ನುಕಳೆದ ಏಪ್ರೀಲ್ 16 ರಂದೇ ಅಪರಾಧಿ ಎಂದು ಘೋಷಿಸಿಸಲಾಗಿತ್ತು.

ಸಹೋದರನ ಹೆಸರಿನಲ್ಲಿದ್ದ ವಾಹನಗಳ ಬಿಡಿಭಾಗ ಕಂಪನಿಯಾದ ದಾಸ್ ಕಂಪನಿ ಮೂಲಕ ಕೋಟ್ಯಂತರ ರೂಪಾಯಿ ಅಕ್ರಮ ವ್ಯವಹಾರ ನಡೆಸಿದ್ದರು. ಅಲ್ಲದೇ ಸ್ಯಾಮಸಂಗ್ ಕಂಪನಿಯಿಂದ ಲಂಚ ಪಡೆದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದರು.

ಇಂತಹುದ್ದೇ ಪ್ರಕರಣದಲ್ಲಿ ಕಳೆದ ಏಪ್ರೀಲ್ ನಲ್ಲಿ ಪದಚ್ಯುತ ಅಧ್ಯಕ್ಷೆ ಪಾರ್ಕ್ ಜಿಯುನ್ ಹೈ ಕೂಡಾ 24 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು.