ಭೂತಾನ್ ರಾಜಕುಮಾರನಿಗೆ ಚೆನ್ನಪಟ್ಟಣ ಗೊಂಬೆ ಉಡುಗೊರೆ

0
18

ಭೂತಾನ್ ರಾಜ ಜಿಗ್ ಮೆ ಖೇಸರ್ ನಂಜಿಲ್ ವಾಂಗ್ ಚುಕ್ ದಂಪತಿಗಳನ್ನು ಇಂದು ಭೇಟಿ ಮಾಡಿದ್ದ ಬಾರತ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೂತಾನ್ ರಾಜಕುಮಾರನಿಗೆ ಕರ್ನಾಟಕದ ಪ್ರಸಿದ್ದ ಚೆನ್ನಪಟ್ಟಣ ಗೊಂಬೆಗಳನ್ನು ಉಡುಗೊರೆ ನೀಡಿದ್ದಾರೆ.

“ಭೂತಾನಿನ ಪ್ರಖ್ಯಾತ ರಾಜ, ರಾಣಿ ಯವರೇ, ಭೂತಾನದ ಯುವ ರಾಜಕುಮಾರ. ಚೆನ್ನಪಟ್ಟಣ (ಕರ್ನಾಟಕ) ಗೊಂಬೆಗಳಂತೆ ಮುದ್ದಾಗಿದ್ದು ನೋಡಲು ಸಂತಸವಾಗುತ್ತದೆ” ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.

ಭೂತಾನ್ ರಾಜ ಪರಿವಾರದೊಡನೆ ಕಳೆದ ಸಂತಸದ ಕ್ಷಣಗಳ ಚಿತ್ರಗಳೊಂದಿಗೆ ನಿರ್ಮಲಾ ಸೀತಾರಾಮನ್ ತಮ್ಮ ಟ್ವಿಟ್ಟರ್ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಭೂತಾನ್ ರಾಜ ತಮ್ಮ ನಾಲ್ಕು ದಿನಗಳ ಭಾರತ ಭೇಟಿಯನ್ನು ಮಂಗಳವಾರದಿಂದ ಪ್೦ರಾರಂಭಿಸಿದ್ದರು.