ಭಾ‌ರ್ತಿ ಆಕ್ಸಾ ಲೈಫ್‌ ಹಾಗೂ ಕರ್ಣಾಟಕ ಬ್ಯಾಂಕ್ ಒಪ್ಪಂದ

0
436

ಕರ್ಣಾಟಕ ಬ್ಯಾಂಕ್‌ ಹಲವು ವಿಮಾ ಉತ್ಪನ್ನಗಳನ್ನು ಗ್ರಾಹಕರಿಗೆ ವಿತರಿಸುತ್ತಿದ್ದು, ಇದೀಗ ಭಾರ್ತಿ ಆಕ್ಸಾ ಲೈಫ್‌ ಇನ್ಶೂರೆನ್ಸ್ ಕಂಪನಿಯ ಉತ್ಪನ್ನಗಳನ್ನು ವಿತರಿಸಲು ಒಪ್ಪಂದ ಮಾಡಿಕೊಂಡಿದೆ.

ಮಂಗಳೂರು: ಕರ್ಣಾಟಕ ಬ್ಯಾಂಕ್‌ ಹಲವು ವಿಮಾ ಉತ್ಪನ್ನಗಳನ್ನು ಗ್ರಾಹಕರಿಗೆ ವಿತರಿಸುತ್ತಿದ್ದು, ಇದೀಗ ಭಾರ್ತಿ ಆಕ್ಸಾ ಲೈಫ್‌ ಇನ್ಶೂರೆನ್ಸ್ ಕಂಪನಿಯ ಉತ್ಪನ್ನಗಳನ್ನು ವಿತರಿಸಲು ಒಪ್ಪಂದ ಮಾಡಿಕೊಂಡಿದೆ.

ನಗರದಲ್ಲಿನ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಏಪ್ರೀಲ್ 2 ರ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.

‘ಕರ್ಣಾಟಕ ಬ್ಯಾಂಕ್‌ ಈಗಾಗಲೇ ಪಿಎನ್‌ಬಿ ಲೈಫ್‌ ಇನ್ಶೂರೆನ್ಸ್ ಕಂಪನಿ ಮತ್ತು ಲೈಫ್‌ ಇನ್ಶೂರೆನ್ಸ್ ಕಾರ್ಪೊರೇಷನ್‌ ಆಫ್ ಇಂಡಿಯಾದ ಉತ್ಪನ್ನಗಳನ್ನು ವಿತರಿಸುತ್ತಿದ್ದು, ಭಾರತಿ ಆಕ್ಸಾ ಇನ್ಶೂರೆನ್ಸ್ ಕಂಪನಿಯೊಂದಿಗಿನ ಒಪ್ಪಂದವು ಬ್ಯಾಂಕ್‌ನ ವಿಮಾ ಉತ್ಪನ್ನ ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿದೆ. ಗ್ರಾಹಕರಿಗೆ ಒಳ್ಳೆಯ ಸೇವೆ ನೀಡುವ ಮೂಲಕ ಅವರ ಹಿತರಕ್ಷಣೆಗೆ ಬದ್ಧವಾಗಿದೆ’ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್‌. ತಿಳಿಸಿದರು.

‘ದೇಶದಾದ್ಯಂತ ಇರುವ ಬ್ಯಾಂಕಿನ 839 ಶಾಖೆಗಳ ಗ್ರಾಹಕರಿಗೆ ಈ ವಿಮೆ ಸೌಲಭ್ಯ ಲಭ್ಯವಾಗಲಿವೆ’ ಎಂದರು.

‘ಕರ್ಣಾಟಕ ಬ್ಯಾಂಕ್‌ ಜತೆಗಿನ ಒಪ್ಪಂದ ನಮಗೆ ಮಹತ್ವದ್ದಾಗಿದ್ದು, ಬ್ಯಾಂಕ್‌ನ ಗ್ರಾಹಕರ ನಿರೀಕ್ಷೆಗಳಿಗೆ ಅನುಗುಣವಾಗಿ ಉತ್ಕೃಷ್ಟ ಸೇವೆ ಒದಗಿಸಲು ಬದ್ಧರಾಗಿದ್ದೇವೆ’ ಎಂದು ಭಾರ್ತಿ ಎಂಟರ್‌ಪ್ರೈಸಸ್‌ನ ಫೈನಾನ್ಶಿಯಲ್‌ ಸರ್ವೀಸಸ್‌ನ ವ್ಯವಸ್ಥಾಪಕ ನಿರ್ದೇಶಕ ಸ್ಯಾಮ್‌ ಘೋಷ್‌ ಹೇಳಿದರು.