ಭಾರತ ಸಂಜಾತ ಸಂಶೋಧಕಿ “ವೀಣಾ ಸಹಜವಾಲಾ”ಗೆ 23.66 ಕೋಟಿ ದೇಣಿಗೆ

0
34

ಬ್ಯಾಟರಿ ಹಾಗೂ ಇತರೆ ತ್ಯಾಜ್ಯಗಳನ್ನು ಮರುಬಳಕೆ ಮಾಡುವಂತಹ ಸುಧಾರಿತ ಉತ್ಪಾದನಾ ಸಾಮರ್ಥ್ಯ ಅಭಿವೃದ್ಧಿಪಡಿಸಿದ್ದಕ್ಕಾಗಿ ಭಾರತ ಸಂಜಾತ ಸಂಶೋಧಕಿ ವೀಣಾ ಸಹಜವಾಲಾ ಅವರಿಗೆ 23.66 ಕೋಟಿ ದೇಣಿಗೆ ದೊರಕಿದೆ.

ಮೆಲ್ಬರ್ನ್ (ಪಿಟಿಐ): ಬ್ಯಾಟರಿ ಹಾಗೂ ಇತರೆ ತ್ಯಾಜ್ಯಗಳನ್ನು ಮರುಬಳಕೆ ಮಾಡುವಂತಹ ಸುಧಾರಿತ ಉತ್ಪಾದನಾ ಸಾಮರ್ಥ್ಯ ಅಭಿವೃದ್ಧಿಪಡಿಸಿದ್ದಕ್ಕಾಗಿ ಭಾರತ ಸಂಜಾತ ಸಂಶೋಧಕಿ ವೀಣಾ ಸಹಜವಾಲಾ ಅವರಿಗೆ 23.66 ಕೋಟಿ ದೇಣಿಗೆ ದೊರಕಿದೆ.

ವೀಣಾ ಅವರು, ಯುನಿವರ್ಸಿಟಿ ಆಫ್ ನ್ಯೂ ಸೌತ್ ವೇಲ್ಸ್ (ಯುಎನ್‌ಎಸ್‌ಡಬ್ಲ್ಯು) ಕೇಂದ್ರದ ಸಂಸ್ಥಾಪಕ ನಿರ್ದೇಶಕಿ ಆಗಿದ್ದಾರೆ. 

ಈ ಕೇಂದ್ರ ಸುಸ್ಥಿರ ವಸ್ತುಗಳ ಸಂಶೋಧನೆ ಮತ್ತು ತಂತ್ರಜ್ಞಾನ (ಸ್ಮಾರ್ಟ್) ಕುರಿತು ಕಾರ್ಯನಿರ್ವಹಿಸುತ್ತದೆ.

‘ನಾವು ವಿನ್ಯಾಸಗೊಳಿಸುವ, ಉತ್ಪಾದಿಸುವ, ಬಳಸುವ ಮತ್ತು ಬಳಿಕ ನಿರುಪಯುಕ್ತವಾಗುವ ವಸ್ತುಗಳ ಕುರಿತ ನಮ್ಮ ಧೋರಣೆ ಬದಲಿಸಿಕೊಳ್ಳಬೇಕಾದ ಸಮಯವಿದು. ನವೀಕರಿಸಲಾಗದ ಸಂಪನ್ಮೂಲಗಳ ಮೇಲಿನ ನಮ್ಮ ಅವಲಂಬನೆ ಕಡಿಮೆ ಮಾಡಬೇಕೆಂದರೆ, ಈ ವಸ್ತುಗಳನ್ನು ನವೀಕೃತ ಸಂಪನ್ಮೂಲವಾಗಿ ಪರಿವರ್ತಿಸಬೇಕಾದ ಬಗ್ಗೆ ಚಿಂತನೆ ನಡೆಸಬೇಕು’ ಎಂದು ಸಹಜವಾಲಾ ಹೇಳಿದ್ದಾರೆ. ಅವರು, ಆಸ್ಟ್ರೇಲಿಯಾದ ತ್ಯಾಜ್ಯ ಮತ್ತು ಸಂಪನ್ಮೂಲ ಮರುಬಳಕೆ ಯೋಜನೆಯ ನೇತೃತ್ವ ವಹಿಸಿಕೊಳ್ಳಲಿದ್ದಾರೆ ಎಂದು ಯುಎನ್‌ಎಸ್‌ಡಬ್ಲ್ಯು ತಿಳಿಸಿದೆ.
 
ತ್ಯಾಜ್ಯಗಳನ್ನು ಮರುಬಳಕೆ ವಸ್ತುಗಳನ್ನಾಗಿ ಸಂಸ್ಕರಿಸುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಉತ್ತೇಜಿಸುವುದು ಈ ಯೋಜನೆ ಉದ್ದೇಶ: ಯುಎನ್‌ಎಸ್‌ಡಬ್ಲ್ಯು