ಭಾರತ –ಲಂಕಾ ಸೇನೆ ಕವಾಯತು

0
467

ಭಾರತ ಮತ್ತು ಶ್ರೀಲಂಕಾ ಮಾರ್ಚ್ 27 ರ ಬುಧವಾರದಿಂದ ಇಲ್ಲಿ ಎರಡು ವಾರಗಳ ಜಂಟಿ ಸೇನಾ ಕವಾಯತು ಆರಂಭಿಸಿವೆ.

ಕೊಲಂಬೊ (ಪಿಟಿಐ): ಭಾರತ ಮತ್ತು ಶ್ರೀಲಂಕಾ  ಮಾರ್ಚ್ 27 ರ ಬುಧವಾರದಿಂದ ಇಲ್ಲಿ ಎರಡು ವಾರಗಳ ಜಂಟಿ ಸೇನಾ ಕವಾಯತು ಆರಂಭಿಸಿವೆ.

‘ಭಯೋತ್ಪಾದನೆ ಹತ್ತಿಕ್ಕುವ ಕುರಿತು ಉಭಯ ಸೇನೆಗಳ ಸಹಭಾಗಿತ್ವ ಹಾಗೂ ಸಹಕಾರ ಬೆಸೆಯುವ ಉದ್ದೇಶದಿಂದ ಈ ಕವಾಯತು ನಡೆಸುತ್ತಿದ್ದೇವೆ’ ಎಂದು ಇಲ್ಲಿನ ಸೇನಾಧಿಕಾರಿಗಳು ತಿಳಿಸಿದ್ದಾರೆ.

‘ಮಿತ್ರಶಕ್ತಿ–6’ ಹೆಸರಿನ ಈ ಅಭ್ಯಾಸವನ್ನು ಉಭಯ ದೇಶಗಳ ಸೇನಾ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ರೂಪಿಸಲಾಗಿದೆ. 120 ಭಾರತೀಯ ಯೋಧರು ಮತ್ತು ಸಾಕಷ್ಟು ಶ್ರೀಲಂಕಾ ಯೋಧರು ಕವಾಯತಿನಲ್ಲಿ ಪಾಲ್ಗೊಂಡಿದ್ದಾರೆ. ಸೇನಾ ತಂತ್ರಗಳು, ಭಯೋತ್ಪಾದನೆ ಪ್ರತಿರೋಧಿಸುವ ಅಭ್ಯಾಸಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಉಭಯ ಸೇನೆಯವರು ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು.