ಭಾರತ ಮೂಲದ ವಿದ್ಯಾರ್ಥಿನಿ “ನಿಯಾ ಟೋನಿ” ಗೆ ಎಮಿರೇಟ್ಸ್ ಪ್ರಶಸ್ತಿ

0
45

ಪರಿಸರ ಸ್ವಚ್ಛತೆಗಾಗಿ ಶ್ರಮಿಸಿದ ಭಾರತ ಮೂಲದ 8 ವರ್ಷದ ವಿದ್ಯಾರ್ಥಿನಿ ನಿಯಾ ಟೋನಿ ಎಮಿರೇಟ್ಸ್ ಪ್ರಶಸ್ತಿ ಪಡೆದಿದ್ದಾಳೆ.

ದುಬೈ (ಪಿಟಿಐ): ಪರಿಸರ ಸ್ವಚ್ಛತೆಗಾಗಿ ಶ್ರಮಿಸಿದ ಭಾರತ ಮೂಲದ 8 ವರ್ಷದ ವಿದ್ಯಾರ್ಥಿನಿ ನಿಯಾ ಟೋನಿ  ಎಮಿರೇಟ್ಸ್ ಪ್ರಶಸ್ತಿ ಪಡೆದಿದ್ದಾಳೆ. 

ಎಮಿರೇಟ್ಸ್ ಪರಿಸರ ಸಂಸ್ಥೆ ಆಯೋಜಿಸಿದ್ದ ತ್ಯಾಜ್ಯ ಮರುಬಳಕೆ ರಾಷ್ಟ್ರೀಯ ಅಭಿಯಾನದಲ್ಲಿ ನಿಯಾ 15,000 ಕೆ.ಜಿ ಕಾಗದದ ಕಸ ಸಂಗ್ರಹಿಸಿದ್ದಕ್ಕೆ ಈ ಗೌರವ ಸಿಕ್ಕಿದೆ. ಈಕೆ ಸ್ವಚ್ಛತಾ ಅಭಿಯಾನದಲ್ಲಿ ನಾಗರಿಕರಿಗೆ ಮಾದರಿಯಾಗಿದ್ದಾಳೆ ಎಂದು ಸ್ಥಳೀಯ ಸುದ್ದಿವಾಹಿನಿ ವರದಿ ಮಾಡಿದೆ. 

‘ವಾರಕ್ಕೊಮ್ಮೆ ಎಲ್ಲ ಮನೆಗಳಿಗೆ ಹೋಗಿ, ಜನರಿಗೆ ಬೇಡವಾದ ವೃತ್ತಪತ್ರಿಕೆ, ನಿಯತಕಾಲಿಕೆ ಮತ್ತು ಕಾಗದಗಳನ್ನು ಸಂಗ್ರಹಿಸಿದೆ. ಪ್ರತಿ ಮಕ್ಕಳು ಪರಿಸರ ಸ್ವಚ್ಛಗೊಳಿಸಲು ಶ್ರಮಿಸಿದರೆ ವೃದ್ಧಾಪ್ಯದಲ್ಲೂ ಹಸಿರಿನ ಭೂಮಿಯನ್ನು ಕಾಣಬಹುದು’ ಎಂದು ಅಭಿಪ್ರಾಯ ಪಟ್ಟಿದ್ದಾಳೆ. 

ಇಂಗಾಲದ ಡೈಆಕ್ಸೈಡ್‌ ಹೊರಹೊಮ್ಮುವುದನ್ನು ತಡೆಯುವ ನಿಟ್ಟಿನಲ್ಲಿ ಎಮಿರೇಟ್ಸ್‌ ಗ್ರೂಪ್‌ ಕೈಗೊಂಡ ಅಭಿಯಾನದಲ್ಲಿ ಬರೋಬ್ಬರಿ 73,393 ಮೆಟ್ರಿಕ್‌ ಟನ್‌ ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ. ಇದರಲ್ಲಿ ಕಾಗದ, ಪ್ಲಾಸ್ಟಿಕ್‌, ಗಾಜು, ಕ್ಯಾನ್‌ಗಳು ಮತ್ತು ಮೊಬೈಲ್‌ ಫೋನ್‌ಗಳು ಸೇರಿವೆ.