ಭಾರತ ಮಹಿಳಾ ಬಾಕ್ಸಿಂಗ್‌ ತಂಡದ ಮುಖ್ಯ ಕೋಚ್‌ ಆಗಿ “ಮೊಹಮ್ಮದ್‌ ಅಲಿ ಕ್ವಾಮರ್‌” ನೇಮಕ

0
652

ಮೊಹಮ್ಮದ್‌ ಅಲಿ ಕ್ವಾಮರ್‌ ಅವರು ಭಾರತ ಮಹಿಳಾ ಬಾಕ್ಸಿಂಗ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಈ ಹುದ್ದೆ ಅಲಂಕರಿಸಿದ ಅತಿ ಕಿರಿಯ ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ.

ನವದೆಹಲಿ (ಪಿಟಿಐ): ಮೊಹಮ್ಮದ್‌ ಅಲಿ ಕ್ವಾಮರ್‌ ಅವರು ಭಾರತ ಮಹಿಳಾ ಬಾಕ್ಸಿಂಗ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಈ ಹುದ್ದೆ ಅಲಂಕರಿಸಿದ ಅತಿ ಕಿರಿಯ ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ.

ಭಾರತ ಬಾಕ್ಸಿಂಗ್‌ ಫೆಡರೇಷನ್‌ (ಬಿಎಫ್‌ಐ) ಈ ಹಿಂದೆ ಕೋಚ್‌ ಆಗಿದ್ದ ಶಿವ ಸಿಂಗ್‌ ಅವರ ಬದಲು 38 ವರ್ಷ ವಯಸ್ಸಿನ ಕ್ವಾಮರ್‌ಗೆ ಈ ಜವಾಬ್ದಾರಿ ವಹಿಸಿದೆ.

 ಅರ್ಜುನ ಪ್ರಶಸ್ತಿ ‍ಪುರಸ್ಕೃತರಾಗಿ ರುವ ಮೊಹಮ್ಮದ್‌ ಅವರು ಮೂರು ವರ್ಷಗಳ ಕಾಲ ರೈಲ್ವೇಸ್‌ ಸ್ಪೋರ್ಟ್ಸ್‌ ಪ್ರೊಮೋಷನ್‌ ಬೋರ್ಡ್‌ನ ಮಹಿಳಾ ತಂಡದ ಕೋಚ್‌ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಷ್ಟ್ರೀಯ ಶಿಬಿರದಲ್ಲಿ ಸಹಾಯಕ ಕೋಚ್‌ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟದ ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಬಾಕ್ಸರ್‌ ಎಂಬ ದಾಖಲೆಯೂ ಅವರ ಹೆಸರಿನಲ್ಲಿದೆ. 2002ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ನಡೆದಿದ್ದ ಕೂಟದ ಲೈಟ್‌ ಫ್ಲೈವೇಟ್‌ ವಿಭಾಗದಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು.

‘ಕೋಚ್‌ ಆಗಿ ನೇಮಕವಾದ ವಿಷಯ ಗೊತ್ತಾದ ಕೂಡಲೇ ಖುಷಿಯ ಜೊತೆ ಅಚ್ಚರಿಯೂ ಆಯಿತು. ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ’ ಎಂದು ಕೋಲ್ಕತ್ತದ ಮೊಹಮ್ಮದ್ ಸಂತಸ ವ್ಯಕ್ತಪಡಿಸಿದ್ದಾರೆ.