ಭಾರತ-ಪಾಕ್‌ ಯುದ್ಧದ ಹೀರೊ ವೈಸ್‌ ಅಡ್ಮಿರಲ್‌ ಅವತಿ ನಿಧನ

0
288

1971ರ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ನೌಕಾಪಡೆಯ ಪಶ್ಚಿಮ ತುಕಡಿಯನ್ನು ಮುನ್ನಡೆಸಿದ್ದ ವೈಸ್‌ ಅಡ್ಮಿರಲ್‌ ಎಂ.ಪಿ.ಅವತಿ (91) ವಿಧಿವಶರಾಗಿದ್ದಾರೆ

ಪುಣೆ:1971ರ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ನೌಕಾಪಡೆಯ ಪಶ್ಚಿಮ ತುಕಡಿಯನ್ನು ಮುನ್ನಡೆಸಿದ್ದ ವೈಸ್‌ ಅಡ್ಮಿರಲ್‌ ಎಂ.ಪಿ.ಅವತಿ (91) ವಿಧಿವಶರಾಗಿದ್ದಾರೆ
ವೀರಚಕ್ರ ಪುರಸ್ಕಾರಕ್ಕೆ ಪಾತ್ರರಾಗಿದ್ದ ಅವರು, ಮಹಾರಾಷ್ಟ್ರದ ಸತಾರಾದಲ್ಲಿನ ನಿವಾಸದಲ್ಲಿ ಕೊನೆಯುಸಿರೆಳೆದರು ಎಂದು ನೌಕಾಪಡೆ ತಿಳಿಸಿದೆ. 
ಭಾರತ-ಪಾಕ್‌ ಯುದ್ಧದ ವೇಳೆ ಯುದ್ಧ ಸರಕುಗಳನ್ನು ಸಾಗಿಸುತ್ತಿದ್ದ ಪಾಕಿಸ್ತಾನದ ಮೂರು ಹಡಗುಗಳನ್ನು ಅವತಿ ನೇತೃತ್ವದ ತಂಡ ವಶಪಡಿಸಿಕೊಂಡಿತ್ತು. ನಂತರ ಶತ್ರುರಾಷ್ಟ್ರದ ಹಡಗುಗಳನ್ನು ಧ್ವಂಸಗೊಳಿಸಲಾಗಿತ್ತು. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಅವತಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.