ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡ “ಚಿನೂಕ್ ಹೆಲಿಕಾಪ್ಟರ್” ಗಳು

0
501

ಅತಿ ಭಾರ ಹೊರುವ ಅಮೆರಿಕ ನಿರ್ಮಿತ ನಾಲ್ಕು ಚಿನೂಕ್‌ ಹೆಲಿಕಾಪ್ಟರ್‌ಗಳನ್ನು ಮಾರ್ಚ್ 25 ರ ಸೋಮವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಯುಪಡೆಗೆ ಸೇರ್ಪಡೆಗೊಳಿಸಲಾಯಿತು.

ಚಂಡೀಗಡ (ಪಿಟಿಐ): ಅತಿ ಭಾರ ಹೊರುವ ಅಮೆರಿಕ ನಿರ್ಮಿತ ನಾಲ್ಕು ಚಿನೂಕ್‌ ಹೆಲಿಕಾಪ್ಟರ್ಗಳನ್ನು ಮಾರ್ಚ್ 25 ರ  ಸೋಮವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಯುಪಡೆಗೆ ಸೇರ್ಪಡೆಗೊಳಿಸಲಾಯಿತು.

ಈ ವೇಳೆ ಮಾತನಾಡಿದ ಭಾರತೀಯ ವಾಯುಪಡೆಯ ಮುಖ್ಯಸ್ಥ ಬಿ.ಎಸ್‌.ಧನೋಆ, ‘ರಫೇಲ್‌ ಸೇರ್ಪಡೆಯಿಂದ ವಾಯುಪಡೆಯಲ್ಲಿ ಆಮೂಲಾಗ್ರ ಬದಲಾವಣೆ ಆಗುವಂತೆ ಚಿನೂಕ್‌ ಕೂಡ ಸಹಕಾರಿಯಾಗಲಿದೆ’ ಎಂದರು.

ಸಿಎಚ್‌–47ಎಫ್‌ (ಐ) ಮಾದರಿಯ 15 ಚಿನೂಕ್ ಹೆಲಿಕಾಪ್ಟರ್‌ಗಳ ಖರೀದಿಗೆ 2015ರ ಸೆಪ್ಟೆಂಬರ್‌ನಲ್ಲಿ ಬೋಯಿಂಗ್‌ ಸಂಸ್ಥೆ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಮೊದಲ ಹಂತದಲ್ಲಿ ನಾಲ್ಕು ಚಿನೂಕ್‌ ಹೆಲಿಕಾಪ್ಟರ್‌ಗಳು ಭಾರತಕ್ಕೆ ಪೂರೈಕೆಯಾಗಿದೆ.

ಎರಡು ಇಂಜಿನ್‌, ನೇರವಾಗಿ ಮೇಲಕ್ಕೇರುವ ಸಾಮರ್ಥ್ಯ ಹೊಂದಿದ್ದು, ಅತ್ಯಂತ ದುರ್ಗಮ ಪ್ರದೇಶಗಳಿಗೆ ಸೇನೆ, ಶಸ್ತ್ರಾಸ್ತ್ರ ಹಾಗೂ ಇಂಧನವನ್ನು ಕೊಂಡೊಯ್ಯಲು ಸಹಕಾರಿಯಾಗಲಿದೆ.

ರಫೇಲ್‌ ಪರ ಬ್ಯಾಟಿಂಗ್‌: ‘ಭಾರತ ಸೇನೆಗೆ ರಫೇಲ್‌ ಯುದ್ಧ ವಿಮಾನ ಸೇರ್ಪಡೆಗೊಂಡರೆ, ಪಾಕಿಸ್ತಾನವು ಎಂದಿಗೂ ದೇಶದ ಗಡಿನಿಯಂತ್ರಣ ರೇಖೆಯತ್ತ ಬರುವುದಿಲ್ಲ’ ಎಂದು ಧನೋಆ ಅವರು ತಿಳಿಸಿದರು.