ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೂತನ ಗವರ್ನರ್ ಆಗಿ “ಶಕ್ತಿಕಾಂತ್ ದಾಸ್” ನೇಮಕ

0
1311

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೂತನ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ನೇಮಕ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.

ಹೊಸದಿಲ್ಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೂತನ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ನೇಮಕ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. 

ಉರ್ಜಿತ್ ಪಟೇಲ್ ದಿಢೀರ್ ರಾಜೀನಾಮೆ ನೀಡಿದ 24 ಗಂಟೆಯೊಳಗೆ ಆರ್‌ಬಿಐಗೆ ಕೇಂದ್ರ ಸರಕಾರ ನೂತನ ಗವರ್ನರ್ ಅವರನ್ನು ನೇಮಕ ಮಾಡಿದೆ. 

ವೈಯಕ್ತಿಕ ಕಾರಣ ನೀಡಿ ಊರ್ಜಿತ್ ಪಟೇಲ್ ಅವರು ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಹೀಗಾಗಿ ಇಂದು ಶಕ್ತಿಕಾಂತ್ ದಾಸ್ ಅವರು ಆರ್‌ಬಿಐನ 25ನೇ ಗವರ್ನರ್ ಆಗಿ ನೇಮಕ ಮಾಡಲಾಗಿದೆ. 

ಹಲವಾರು ತಿಂಗಳಿಂದ ಕೇಂದ್ರ ಸರಕಾರ ಮತ್ತು ಆರ್‌ಬಿಐ ನಡುವೆ ತಿಕ್ಕಾಟ ನಡೆಯುತ್ತಿದ್ದು, ಹಲವು ಆರ್ಥಿಕ ಸುಧಾರಣೆ ಯೋಜನೆಗಳನ್ನು ಪ್ರಕಟಿಸುವುದಕ್ಕೆ ಅಡ್ಡಿ ಉಂಟಾಗಿತ್ತು. ಆರ್‌ಬಿಐ ಕೇಂದ್ರ ಸರಕಾರದ ನಡುವಿನ ಭಿನ್ನಾಭಿಪ್ರಾಯ ಉರ್ಜಿತ್ ಪಟೇಲ್ ರಾಜೀನಾಮೆಯೊಂದಿಗೆ ಮತ್ತಷ್ಟು ಬಿಗಾಡಿಯಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ, ತ್ವರಿತ ಗತಿಯಲ್ಲಿ ಕ್ರಮ ಕೈಗೊಂಡಿರು ಕೇಂದ್ರ ಸರಕಾರ, ನೂತನ ಗವರ್ನರ್ ಅವರನ್ನು ನೇಮಕ ಮಾಡಿ 2018 ಡಿಸೆಂಬರ್ 11 ರಂದು ಆದೇಶ ಹೊರಡಿಸಿದೆ.  

ಊರ್ಜಿತ್ ಪಟೇಲ್ ದಿಢೀರ್ ರಾಜೀನಾಮೆಯಿಂದ ಬ್ಯಾಂಕಿಂಗ್ ವಲಯದಲ್ಲಿ ಗೊಂದಲಕಾರಿ ವಾತಾವರಣ ಸೃಷ್ಟಿಯಾಗಿತ್ತು.