ಭಾರತೀಯ ಮೂಲದ ಶೇಖ್‌ ಮೊಹಮ್ಮದ್‌ ಮುನೀರ್‌ ಅನ್ಸಾರಿ ಅವರಿಗೆ “ಸ್ಟಾರ್‌ ಆಫ್‌ ಜೆರುಸಲೇಂ ಗೌರವ”

0
28

ಇಂಡೋ-ಪ್ಯಾಲೆಸ್ತೀನ್‌ ಬಾಂಧವ್ಯ ವೃದ್ಧಿಗೆ ಶ್ರಮಿಸಿದ ವಿದೇಶಿಗರಿಗೆ ನೀಡಲಾಗುವ ಅತ್ಯುನ್ನತ ನಾಗರಿಕ ಗೌರವ ‘ಸ್ಟಾರ್‌ ಆಫ್‌ ಜೆರುಸಲೇಂ’ ಪ್ರಶಸ್ತಿಯನ್ನು ಭಾರತೀಯ ಮೂಲದ ಶೇಖ್‌ ಮೊಹಮ್ಮದ್‌ ಮುನೀರ್‌ ಅನ್ಸಾರಿ ಅವರಿಗೆ ಪ್ಯಾಲೆಸ್ತೀನ್‌ ಅಧ್ಯಕ್ಷ ಮಹಮೌದ್‌ ಅಬ್ಬಾಸ್‌ ಪ್ರದಾನ ಮಾಡಿದ್ದಾರೆ.

ಜೆರುಸಲೇಂ : ಇಂಡೋ-ಪ್ಯಾಲೆಸ್ತೀನ್‌ ಬಾಂಧವ್ಯ ವೃದ್ಧಿಗೆ ಶ್ರಮಿಸಿದ ವಿದೇಶಿಗರಿಗೆ ನೀಡಲಾಗುವ ಅತ್ಯುನ್ನತ ನಾಗರಿಕ ಗೌರವ ‘ಸ್ಟಾರ್‌ ಆಫ್‌ ಜೆರುಸಲೇಂ’ ಪ್ರಶಸ್ತಿಯನ್ನು ಭಾರತೀಯ ಮೂಲದ ಶೇಖ್‌ ಮೊಹಮ್ಮದ್‌ ಮುನೀರ್‌ ಅನ್ಸಾರಿ ಅವರಿಗೆ ಪ್ಯಾಲೆಸ್ತೀನ್‌ ಅಧ್ಯಕ್ಷ ಮಹಮೌದ್‌ ಅಬ್ಬಾಸ್‌ ಪ್ರದಾನ ಮಾಡಿದ್ದಾರೆ. 

91 ವರ್ಷದ ಅನ್ಸಾರಿ ಜೆರಸಲೇಂ ನಗರದ ಹೃದಯಭಾಗದಲ್ಲಿರುವ ಐತಿಹಾಸಿಕ ಸ್ಮಾರಕ ‘ಇಂಡಿಯನ್‌ ಹಾಸ್‌ಪೈಸ್‌’ನ ನಿರ್ದೇಶಕರಾಗಿದ್ದಾರೆ. 1924ರಿಂದ ಹಾಸ್‌ಪೈಸ್‌ ಅನ್ಸಾರಿ ಕುಟುಂಬದ ನಿಗಾದಲ್ಲಿದೆ. ಅನ್ಸಾರಿ ತಂದೆ ಶೇಕ್‌ ನಾಜಿರ್‌ ಹುಸೇನ್‌ ಸ್ಮಾರಕದ ನಿರ್ವಹಣೆಗೆ ನೇಮಕಗೊಂಡಿದ್ದರು. 2011ರಲ್ಲಿ ಅನ್ಸಾರಿ ಅವರಿಗೆ ಭಾರತ ಪ್ರವಾಸಿ ದಿವಸ್‌ ಸಮ್ಮಾನ್‌ ಗೌರವ ನೀಡಿ ಸನ್ಮಾನಿಸಿದೆ. 12ನೇ ಶತಮಾನದಲ್ಲಿ ಪಂಜಾಬ್‌ನ ಪ್ರಸಿದ್ಧ ಸೂಫಿ ಸಂತ ಬಾಬಾ ಫರಿದುದ್ದಿನ್‌ ಗಣಜ್‌-ಐ-ಶಾಕರ್‌ ಅಲಿಯಾಸ್‌ ಬಾಬಾ ಫರಿದ್‌ ಜೆರಸಲೇಂಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದ ಸ್ಥಳವನ್ನು ಸ್ಮಾರಕವಾಗಿಸಿ ಸಂರಕ್ಷಿಸಲಾಗಿದೆ. 

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಭಾರತೀಯ ಪ್ರತಿನಿಧಿಯಾಗಿ ಸುನೀಲ್‌ ಕುಮಾರ್‌ ಅವರು, ಉಭಯ ದೇಶಗಳ ಬಾಂಧವ್ಯ ವೃದ್ಧಿಗೆ ಅನ್ಸಾರಿ ಕುಟುಂಬದ ಕೊಡುಗೆಯನ್ನು ಶ್ಲಾಘಿಸಿದರು.