ಭಾರತೀಯ ಪತ್ರಿಕಾ ಮಂಡಳಿ (ಪಿಟಿಐ)ಯ ನೂತನ ಅಧ್ಯಕ್ಷರಾಗಿ “ಎನ್. ರವಿ” ಆಯ್ಕೆ

0
744

ಭಾರತೀಯ ಪತ್ರಿಕಾ ಮಂಡಳಿ (ಪಿಟಿಐ) ಅಧ್ಯಕ್ಷರಾಗಿ ‘ದಿ ಹಿಂದು ಗ್ರೂಪ್‌’ ಪ್ರಕಾಶಕ ಎನ್. ರವಿ ಹಾಗೂ ಉಪಾಧ್ಯಕ್ಷರಾಗಿ ‘ಪಂಜಾಬ್ ಕೇಸರಿ ಗ್ರೂಪ್‌’ ಮುಖ್ಯ ಸಂಪಾದಕ ವಿಜಯ್ ಕುಮಾರ್ ಚೋಪ್ರಾ ಸೆಪ್ಟೆಂಬರ್ 29 ರ ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನವದೆಹಲಿ (ಪಿಟಿಐ): ಭಾರತೀಯ ಪತ್ರಿಕಾ ಮಂಡಳಿ (ಪಿಟಿಐ) ಅಧ್ಯಕ್ಷರಾಗಿ ‘ದಿ ಹಿಂದು ಗ್ರೂಪ್‌’ ಪ್ರಕಾಶಕ ಎನ್. ರವಿ ಹಾಗೂ ಉಪಾಧ್ಯಕ್ಷರಾಗಿ ‘ಪಂಜಾಬ್ ಕೇಸರಿ ಗ್ರೂಪ್‌’ ಮುಖ್ಯ ಸಂಪಾದಕ ವಿಜಯ್ ಕುಮಾರ್ ಚೋಪ್ರಾ ಸೆಪ್ಟೆಂಬರ್ 29 ರ ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  

ಮಂಡಳಿಯ ಸದಸ್ಯರಾಗಿ ದಿ ಪ್ರಿಂಟರ್ಸ್‌ ಮೈಸೂರು (ಪ್ರೈವೇಟ್‌) ಲಿಮಿಟೆಡ್‌ ನಿರ್ದೇಶಕ ಕೆ.ಎನ್. ಶಾಂತಕುಮಾರ್, ಮಹೇಂದ್ರ ಮೋಹನ್ ಗುಪ್ತಾ (ದೈನಿಕ್ ಜಾಗರಣ್), ‘ಟೈಮ್ಸ್‌ ಆಫ್‌ ಇಂಡಿಯಾ’ದ ವಿನೀತ್ ಜೈನ್, ‘ಆನಂದ್ ಬಜಾರ್ ಪತ್ರಿಕಾ’ದ ಅವೀಕ್ ಕುಮಾರ್ ಸರ್ಕಾರ್‌, ‘ಮಾತೃಭೂಮಿ’ಯ ಎಂ‍.ಪಿ. ವೀರೇಂದ್ರ ಕುಮಾರ್, ‘ದಿನಮಲರ್‌’ನ ಆರ್.ಲಕ್ಷ್ಮೀಪತಿ, ‘ಬಾಂಬೆ ಸಮಾಚಾರ್‌’ನ ಹೊರ್ಮುಸ್ಜಿ ಎನ್.ಕಾಮಾ, ನ್ಯಾಯಮೂರ್ತಿ ಆರ್‌.ಸಿ. ಲಹೋಟಿ, ಪ್ರೊ. ದೀಪಕ್ ನಯ್ಯರ್, ಶ್ಯಾಮ್‌ ಸರಣ್ ಹಾಗೂ ಜೆ.ಎಫ್‌.‍ ಪೊಚ್‌ಖನವಲ್ಲಾ ಆಯ್ಕೆಯಾಗಿದ್ದಾರೆ.  

 ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರವಿ (70), ಭಾರತ, ಅಮೆರಿಕದಲ್ಲಿ ಪತ್ರಿಕೋದ್ಯಮದ ಅನುಭವ ಹೊಂದಿದ್ದಾರೆ. ಈ ಹಿಂದೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಅಧ್ಯಕ್ಷರಾಗಿದ್ದ ಅವರು, ಪ್ರಸ್ತುತ ಭಾರತೀಯ ವಿದ್ಯಾಭವನದ ಚೆನ್ನೈ ಕೇಂದ್ರದ ಅಧ್ಯಕ್ಷರಾಗಿದ್ದಾರೆ. 

ಚೋಪ್ರಾ (86) ಪಿಟಿಐ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಕೊಡುಗೆಗಾಗಿ 1990ರಲ್ಲಿ ಅವರು ಪದ್ಮಶ್ರೀ ಪ್ರಶಸ್ತಿಗೆ 
ಭಾಜನರಾಗಿದ್ದಾರೆ. 

ಮುಂಬೈ (ಪಿಟಿಐ): ಕುಟುಂಬಕ್ಕೆ ಇಬ್ಬರೇ ಮಕ್ಕಳಿರಬೇಕು ಎಂಬ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ, ಅಂಗನವಾಡಿ ಕಾರ್ಯಕರ್ತೆಯನ್ನು ಮಹಾರಾಷ್ಟ್ರ ಸರ್ಕಾರ ವಜಾಗೊಳಿಸಿದೆ. ಇದನ್ನು ಖಂಡಿಸಿ ಕಾರ್ಯಕರ್ತೆ ತನ್ವಿ ಸೊಡೈ, ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

2002ರಲ್ಲಿ ಐಸಿಡಿಎಸ್ ಯೋಜನೆಯಡಿ ಕೆಲಸಕ್ಕೆ ಸೇರಿದ ತನ್ವಿ, 2012ರಲ್ಲಿ ‘ಅಂಗನವಾಡಿ ಸೇವಿಕಾ’ ಆಗಿ ಬಡ್ತಿ ಪಡೆದಿದ್ದರು.

‘ಸರ್ಕಾರದ 2014ರ ಅಧಿಸೂಚನೆ ಪ್ರಕಾರ, ರಾಜ್ಯ ಸರ್ಕಾರಿ ನೌಕರರು ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರಬಾರದು. ನೀವು ಮೂರನೇ ಮಗು ಪಡೆದಿರುವುದರಿಂದ ಕೆಲಸದಿಂದ ವಜಾಗೊಳಿಸುತ್ತಿದ್ದೇವೆ’ ಎಂದು ಮಾರ್ಚ್‌ನಲ್ಲಿ ತನ್ವಿ ಅವರಿಗೆ ಸರ್ಕಾರ ಪತ್ರ ಬರೆದಿತ್ತು.

‘ಸರ್ಕಾರದ ಅಧಿಸೂಚನೆ ಹೊರಬೀಳುವ ಹೊತ್ತಿಗೆ ಕಾರ್ಯಕರ್ತೆ ಎಂಟು ತಿಂಗಳ ಗರ್ಭಿಣಿಯಾಗಿದ್ದರು. ಹೀಗಾಗಿ, ಆಕೆಯನ್ನು ವಜಾ ಮಾಡಿರುವುದು ನ್ಯಾಯಸಮ್ಮತವಲ್ಲ’ ಎಂದು ವಕೀಲ ಅಜಿಂಕ್ಯ ಎಂ. ಉದನೆ ವಾದಿಸಿದರು.

‘ಸಣ್ಣ ಕುಟುಂಬದ ನಿಯಮಗಳನ್ನು ಸರ್ಕಾರ 2005ರಿಂದಲೇ ಪ್ರಚುರಪಡಿಸುತ್ತಿದೆ. ಅದರನ್ವಯ, ಸಣ್ಣ ಕುಟುಂಬವೆಂದರೆ ದಂಪತಿ, ಇಬ್ಬರು ಮಕ್ಕಳು ಅಥವಾ ಒಂದು ಮಗು. ಹೀಗಾಗಿ, ಈ ನಿಯಮದ ವ್ಯಾಪ್ತಿಗೆ ಒಳಪಡದ ಹಲವು ನೌಕರರು ಶಿಸ್ತು ಕ್ರಮ ಎದುರಿಸಿದ್ದಾರೆ.’ ಎಂದು ಸರ್ಕಾರದ ಪರವಾಗಿ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಆಶುತೋಷ್‌ ಕುಂಭಕೋಣಿ ತಿಳಿಸಿದರು.

ಅಕ್ಟೋಬರ್‌ 3 ಕ್ಕೆ ವಿಚಾರಣೆ ಮುಂದೂಡಲಾಗಿದೆ.