ಭಾರತೀಯ ಪತ್ರಕರ್ತೆಗೆ 2018ರ ಲಂಡನ್ ಪತ್ರಿಕಾ ಸ್ವಾತಂತ್ರ್ಯ ಪ್ರಶಸ್ತಿಗೆ ಆಯ್ಕೆ

0
401

ಶೌರ್ಯ ಪ್ರದರ್ಶನಕ್ಕಾಗಿ ನೀಡಲಾಗುವ 2018ರ ಲಂಡನ್ ಪತ್ರಿಕಾ ಸ್ವಾತಂತ್ರ್ಯ ಪ್ರಶಸ್ತಿಗೆ ದೆಹಲಿಯ ಪತ್ರಕರ್ತೆ ಸ್ವಾತಿ ಚತುರ್ವೇದಿ ಪಾತ್ರರಾಗಿದ್ದಾರೆ.

ಲಂಡನ್‌ (ಪಿಟಿಐ): ಶೌರ್ಯ ಪ್ರದರ್ಶನಕ್ಕಾಗಿ ನೀಡಲಾಗುವ 2018ರ ಲಂಡನ್ ಪತ್ರಿಕಾ ಸ್ವಾತಂತ್ರ್ಯ ಪ್ರಶಸ್ತಿಗೆ ದೆಹಲಿಯ ಪತ್ರಕರ್ತೆ ಸ್ವಾತಿ ಚತುರ್ವೇದಿ ಪಾತ್ರರಾಗಿದ್ದಾರೆ. 

ತನಿಖಾ ವರದಿಗಳಿಗಾಗಿ ಸ್ವಾತಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಗುರಿಯಾಗಿದ್ದರು.

ಸ್ವಾತಿ ಅವರ ‘ಐ ಆ್ಯಮ್‌ ಎ ಟ್ರೋಲ್‌: ಇನ್‌ಸೈಡ್‌ ದಿ ಸೀಕ್ರೆಟ್‌ ವರ್ಲ್ಡ್‌ ಆಫ್‌ ದಿ ಬಿಜೆಪಿ’ಸ್‌ ಡಿಜಿಟಲ್‌ ಆರ್ಮಿ’ ಕೃತಿಗೆ ಈ ಪ್ರಶಸ್ತಿ ಘೋಷಿಸಲಾಗಿದೆ. ಆಡಳಿತಾರೂಢ ಬಿಜೆಪಿಯ ಮಾಹಿತಿ ತಂತ್ರಜ್ಞಾನ ಘಟಕವು ಯಾವ ರೀತಿಯಲ್ಲಿ ದ್ವೇಷಮಯ ಟ್ರೋಲ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದೆ ಎಂಬುದನ್ನು ಸ್ವಾತಿ ತಮ್ಮ ಕೃತಿಯಲ್ಲಿ ಬಹಿರಂಗಗೊಳಿಸಿದ್ದರು.