ಭಾರತೀಯ ನೌಕಾಪಡೆ ಹಡಗುಗಳಲ್ಲಿ 2020 ರಿಂದ ಏಕಬಳಕೆ ಪ್ಲಾಸ್ಟಿಕ್ ನಿಷೇಧ

0
19

ಏಕಬಳಕೆ ಪ್ಲಾಸ್ಟಿಕ್​ನಿಂದ ದೇಶವನ್ನು ಮುಕ್ತಗೊಳಿಸಲು ಅಭಿಯಾನಕ್ಕೆ ಭಾರತೀಯ ನೌಕಾಪಡೆ ಕೈಜೋಡಿಸಿದೆ. 2020 ಜನವರಿ 1 ರಿಂದ ನೌಕಾಪಡೆ ಹಡಗುಗಳಲ್ಲಿ ಎಲ್ಲ ಮಾದರಿಯ ಏಕ-ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ನಿಷೇಧಿಸಿ ಡೈರೆಕ್ಟರೇಟ್ ಜನರಲ್ ಆಫ್ ಶಿಪ್ಪಿಂಗ್ ಆದೇಶ ಹೊರಡಿಸಿದೆ.

ನವದೆಹಲಿ: ಏಕಬಳಕೆ ಪ್ಲಾಸ್ಟಿಕ್​ನಿಂದ ದೇಶವನ್ನು ಮುಕ್ತಗೊಳಿಸಲು ಅಭಿಯಾನಕ್ಕೆ ಭಾರತೀಯ ನೌಕಾಪಡೆ ಕೈಜೋಡಿಸಿದೆ. 2020 ಜನವರಿ 1 ರಿಂದ ನೌಕಾಪಡೆ ಹಡಗುಗಳಲ್ಲಿ ಎಲ್ಲ ಮಾದರಿಯ ಏಕ-ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ನಿಷೇಧಿಸಿ ಡೈರೆಕ್ಟರೇಟ್ ಜನರಲ್ ಆಫ್ ಶಿಪ್ಪಿಂಗ್ ಆದೇಶ ಹೊರಡಿಸಿದೆ.

ದೇಶವನ್ನು ಏಕಬಳಕೆ ಪ್ಲಾಸ್ಟಿಕ್ ಮುಕ್ತಗೊಳಿಸಲು ಆಗಸ್ಟ್​ 15 ರಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಪ್ರಧಾನಿ ಕನಸು ನನಸು ಮಾಡಲು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.ಭಾರತದ ಹಡಗುಗಳಲ್ಲಿ ಮಾತ್ರವಲ್ಲದೇ ಭಾರತದ ಜಲಗಡಿ ಪ್ರವೇಶಿಸುವ ವಿದೇಶಿ ಹಡಗುಗಳಿಗೂ ಹೊಸ ನಿರ್ಣಯ ವರ್ತಿಸಲಿದೆ. ಮುಂದಿನ ವರ್ಷ 2020 ಜನವರಿ 2 ರಿಂದ ಹೊಸ ನಿರ್ಣಯ ಜಾರಿಗೆ ಬರಲಿದೆ ಎಂದು ಹೇಳಿದೆ.

ಏಕಬಳಕೆ ಪ್ಲಾಸ್ಟಿಕ್ ನಿಷೇಧದಿಂದ ಕೆಲ ಸಮಸ್ಯೆಗಳು ಎದುರಾಗಬಹುದಾಗಿದೆ. ಪರಿಹಾರೋಪಾಯವಾಗಿ ಎಲ್ಲ ಹಡಗುಗಳಿಗೆ ಆಹಾರ ಸಂರಕ್ಷಣೆ ಹಾಗೂ ಇತರೆ ಉದ್ದೇಶಗಳಿಗಾಗಿ ಅಗತ್ಯವಾದ ಚೀಲಗಳು, ಟ್ರೇಗಳು, ಪಾತ್ರೆಗಳು, ಹಾಲಿನ ಬಾಟಲಿಗಳು, ಶಾಂಪೂ ಬಾಟಲಿಗಳು, ಐಸ್ ಕ್ರೀಮ್ ಸಂರಕ್ಷಿಸುವ ಉತ್ಪನ್ನಗಳು, ನೀರು ಮತ್ತು ಇತರ ಪಾನೀಯಗಳಿಗೆ ಬಾಟಲಿಗಳು, ದ್ರವ ಮತ್ತು ಬಿಸ್ಕತ್ತು ಟ್ರೇಗಳನ್ನು ವಿತರಿಸಲಾಗುತ್ತದೆ ಎಂದು ಶಿಪ್ಪಿಂಗ್ ಕಾರ್ಪೊರೇಷನ್ ತಿಳಿಸಿದೆ.

ಸಾಗರ ಜೀವಿಗಳಿಗೆ ಏಕಬಳಕೆ ಪ್ಲಾಸ್ಟಿಕ್ ಮರಣ ಶಾಸನವಾಗಿ ಪರಿಣಮಿಸಿದೆ. ಪ್ಲಾಸ್ಟಿಕ್ ಬಳಕೆಗೆ ಸಮಗ್ರ ನೀತಿ ರೂಪುಗೊಳ್ಳದಿದ್ದಲ್ಲಿ 2050 ವೇಳೆಗೆ ಸಾಗರಗಳಲ್ಲಿರುವ ಮೀನುಗಳ ತೂಕಕ್ಕಿಂತ ಪ್ಲಾಸ್ಟಿಕ್ ತೂಕವೇ ಅಧಿಕವಾಗಿರಲಿದೆ ಎಂದು ಅಂತಾರಾಷ್ಟ್ರೀಯ ಕಡಲ ಸಂಸ್ಥೆ  ತಿಳಿಸಿದೆ.