ಭಾರತೀಯ ಚಿತ್ರರಂಗದಿಂದ ಪಾಕ್​ ಕಲಾವಿದರಿಗೆ ಬ್ಯಾನ್​: ಎಐಸಿಡಬ್ಲ್ಯೂ ನಿರ್ಧಾರ

0
401

ಸಿಆರ್​ಪಿಎಫ್​ ಯೋಧರ ಮೇಲೆ ನಡೆದ ಉಗ್ರರ ದಾಳಿ ಇಡೀ ದೇಶದಲ್ಲಿ ಪ್ರತೀಕಾರದ ಕಿಚ್ಚು ಎಬ್ಬಿಸಿದ್ದು, ಇದೀಗ ಅಖಿಲ ಭಾರತ ಸಿನಿಮಾ ನೌಕರರ ಒಕ್ಕೂಟ(AICW) ಪಾಕಿಸ್ತಾನದ ಕಲಾವಿದರನ್ನು ಸಂಪೂರ್ಣವಾಗಿ ನಿಷೇಧಿಸಿರುವುದಾಗಿ ಅಧಿಕೃತವಾಗಿ ಘೋಷಿಸಿದೆ.

ಮುಂಬೈ: ಸಿಆರ್​ಪಿಎಫ್​ ಯೋಧರ ಮೇಲೆ ನಡೆದ ಉಗ್ರರ ದಾಳಿ ಇಡೀ ದೇಶದಲ್ಲಿ ಪ್ರತೀಕಾರದ ಕಿಚ್ಚು ಎಬ್ಬಿಸಿದ್ದು, ಇದೀಗ ಅಖಿಲ ಭಾರತ ಸಿನಿಮಾ ನೌಕರರ ಒಕ್ಕೂಟ(AICW) ಪಾಕಿಸ್ತಾನದ ಕಲಾವಿದರನ್ನು ಸಂಪೂರ್ಣವಾಗಿ ನಿಷೇಧಿಸಿರುವುದಾಗಿ ಅಧಿಕೃತವಾಗಿ ಘೋಷಿಸಿದೆ.

ಅಖಿಲ ಭಾರತ ಸಿನಿಮಾ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿರುವ ರೋನಕ್​ ಸುರೇಶ್​​​ ಜೈನ್ ಅವರು ಈ ಕುರಿತು ಸೋಮವಾರ ಅಧಿಸೂಚನೆ ಹೊರಡಿಸಿದ್ದು, ಸಿಆರ್​ಪಿಎಫ್​ ಯೋಧರನ್ನು ಗುರಿಯಾಗಿರಿಸಿಕೊಂಡು ಫೆ.14ರಂದು ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯನ್ನು ಎಐಸಿಡಬ್ಲ್ಯೂ ತೀವ್ರವಾಗಿ ಖಂಡಿಸಿದೆ. ಹುತಾತ್ಮ ಯೋಧರ ಕುಟುಂಬಗಳಿಗೆ ನಾವು ಸಂತಾಪ ಸೂಚಿಸುತ್ತೇವೆ ಎಂದು ತಿಳಿಸಿದೆ.

ನಾವು ಅಧಿಕೃತವಾಗಿ ಘೋಷಿಸುತ್ತಿದ್ದು, ಪಾಕಿಸ್ತಾನದ ಕಲಾವಿದರನ್ನು ಸಂಪೂರ್ಣವಾಗಿ ಚಿತ್ರರಂಗದಿಂದ ನಿಷೇಧಿಸಿದ್ದೇವೆ. ಪಾಕಿಸ್ತಾನಿ ಕಲಾವಿದರ ಜತೆ ಕಾರ್ಯನಿರ್ವಹಿಸಲು ಯಾವುದೇ ಸಂಘ ಒತ್ತಾಯ ಮಾಡಿದರೆ, ಅಂತಹ ಸಂಘವನ್ನು ನಿಷೇಧಿಸಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ. ದೇಶವೇ ಮೊದಲು. ನಾವು ದೇಶದ ಪರವಾಗಿ ನಿಂತಿದ್ದೇವೆ ಎಂದು ಎಐಸಿಡಬ್ಲ್ಯೂ ಹೇಳಿದೆ. (ಏಜೆನ್ಸೀಸ್​)