ಭಾರತೀಯ ಸೇನೆಗೆ ಟಿ-90 ಭೀಷ್ಮ ಬಲ: ಅತ್ಯಾಧುನಿಕ ಯುದ್ಧ ಟ್ಯಾಂಕ್​ಗಳ ಉತ್ಪಾದನೆಗೆ ನಿರ್ಧಾರ

0
25

ಭಾರತೀಯ ಸೇನೆ ಪಾಕ್ ಗಡಿಯಲ್ಲಿ ತನ್ನ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ನಿರ್ಧರಿಸಿದ್ದು, 464 ಅತ್ಯಾಧುನಿಕ ಟಿ-90 ‘ಭೀಷ್ಮ’ ಯುದ್ಧ ಟ್ಯಾಂಕ್​ಗಳನ್ನು 2022 ರಿಂದ 2026ರೊಳಗೆ ಸೇರ್ಪಡೆಗೊಳಿಸಲು ಮುಂದಾಗಿದೆ.

ನವದೆಹಲಿ: ಭಾರತೀಯ ಸೇನೆ ಪಾಕ್ ಗಡಿಯಲ್ಲಿ ತನ್ನ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ನಿರ್ಧರಿಸಿದ್ದು, 464 ಅತ್ಯಾಧುನಿಕ ಟಿ-90 ‘ಭೀಷ್ಮ’ ಯುದ್ಧ ಟ್ಯಾಂಕ್​ಗಳನ್ನು 2022 ರಿಂದ 2026ರೊಳಗೆ ಸೇರ್ಪಡೆಗೊಳಿಸಲು ಮುಂದಾಗಿದೆ.

13,448 ಕೋಟಿ ರೂ. ವೆಚ್ಚದಲ್ಲಿ ಟಿ-90 ಭೀಷ್ಮ ಟ್ಯಾಂಕ್ ತಯಾರಿಸುವ ಲೈಸನ್ಸ್​ನ್ನು ರಷ್ಯಾದಿಂದ ಪಡೆದುಕೊಳ್ಳಲು ರಕ್ಷಣಾ ಸಂಪುಟ ಸಮಿತಿ ಅನುಮೋದನೆ ನೀಡಿತ್ತು. ಲೈಸನ್ಸ್ ಪಡೆಯುವ ಪ್ರಕ್ರಿಯೆ ಸದ್ಯ ಜಾರಿಯಲ್ಲಿದ್ದು, ಭಾರತದ ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅವಧಿ ಹೆವಿ ವೆಹಿಕಲ್ ಫ್ಯಾಕ್ಟರಿಗೆ ಟ್ಯಾಂಕ್​ಗಳನ್ನು ಉತ್ಪಾದಿಸುವ ಹೊಣೆ ನೀಡಲಾಗುವುದು ಎಂದು ರಕ್ಷಣಾ ಸಂಪುಟ ಸಮಿತಿ ತಿಳಿಸಿದೆ.

ಭಾರತೀಯ ಸೇನೆಯ 67 ತುಕಡಿಗಳು ಈಗಾಗಲೇ 1070 ಟಿ-90 ಟ್ಯಾಂಕ್, 124 ಅರ್ಜುನ್, 2400 ಹಳೆಯ ತಂತ್ರಜ್ಞಾನದ ಟಿ-72 ಟ್ಯಾಂಕ್​ಗಳನ್ನು ಹೊಂದಿದೆ. -ಠಿ;8525 ಕೋಟಿ ನೀಡಿ 2001ರಲ್ಲಿ ರಷ್ಯಾದಿಂದ 657 ಟಿ-90 ಭೀಷ್ಮ ಟ್ಯಾಂಕ್​ಗಳನ್ನು ಖರೀದಿಸಲಾಗಿತ್ತು. ಬಳಿಕ 1000 ಟ್ಯಾಂಕ್​ಗಳನ್ನು ಭಾರತದಲ್ಲಿ ಉತ್ಪಾದಿಸಲು ರಷ್ಯಾದಿಂದ ಲೈಸನ್ಸ್ ಪಡೆಯಲು ಅನುಮೋದನೆ ನೀಡಲಾಗಿತ್ತು. ಆದರೆ ಈ ಪ್ರಕ್ರಿಯೆ ವಿಳಂಬವಾಗಿತ್ತು. ಈಗ ಲೈಸನ್ಸ್ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, 30- 40 ತಿಂಗಳ ಒಳಗಾಗಿ ಮೊದಲ ಬ್ಯಾಚ್​ನ 64 ಅತ್ಯಾಧುನಿಕ ಭೀಷ್ಮ ಟ್ಯಾಂಕ್​ಗಳು ಸೇನೆ ಸೇರಲಿವೆ.

ಪಾಕ್​ನಿಂದ ಬೇಡಿಕೆ

ಭಾರತ ಟಿ-90 ಭೀಷ್ಮ ಟ್ಯಾಂಕ್​ಗಳ ನಿರ್ಮಾಣಕ್ಕೆ ಮುಂದಾಗಿರುವ ಬೆನ್ನಲ್ಲೇ ಪಾಕಿಸ್ತಾನ ಕೂಡ ರಷ್ಯಾದಿಂದ ಟಿ-90 ಟ್ಯಾಂಕ್​ಗಳನ್ನು ಖರೀದಿಸಲು ಮಾತುಕತೆ ನಡೆಸಿದೆ. ಮಿತ್ರ ರಾಷ್ಟ್ರ ಚೀನಾ ಸಹಯೋಗದೊಂದಿಗೆ ಟ್ಯಾಂಕ್​ಗಳನ್ನು ಸ್ವದೇಶಿ ಯಾಗಿ ನಿರ್ವಿುಸಲು ಪಾಕ್ ಚಿಂತನೆ ನಡೆಸಿದೆ.

ಟಿ-90 ಭೀಷ್ಮ ಸಾಮರ್ಥ್ಯ

47 ಟನ್ ತೂಕ ಹೊಂದಿರುವ ಟಿ-90 ಭೀಷ್ಮ ಟ್ಯಾಂಕ್ ಎಂಥ ಪ್ರದೇಶದಲ್ಲೂ ಸುಮಾರು 60 ಕಿಮೀ ವೇಗದಲ್ಲಿ ಸಂಚರಿಸುವ ಹಾಗೂ ಎಲ್ಲ ರೀತಿಯ ವಾತಾವರಣಕ್ಕೂ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಅತ್ಯಂತ ಭದ್ರವಾದ ಕವಚ ಹೊಂದಿರುವುದರಿಂದ ಸೈನಿಕರು ಸುರಕ್ಷಿತವಾಗಿರುತ್ತಾರೆ. ಇವುಗಳನ್ನು ವಿಮಾನ ಮೂಲಕ ಒಂದು ಸ್ಥಳದಿಂದ ಮತ್ತೊಂದು ಕಡೆ ಕೊಂಡೊಯ್ಯಬಹುದಾಗಿದೆ. ನಿಗದಿತ ಪರಿಧಿಯೊಳಗಿರುವ ಶತ್ರು ವಿಮಾನಗಳನ್ನೂ ಧ್ವಂಸಗೊಳಿಸುವ ಸಾಮರ್ಥ್ಯ ಇದಕ್ಕಿದೆ.