ಭಾರತೀಯ ಮೂಲದ “ನವೋಮಿ ಜಹಾಂಗೀರ್” ಅಮೆರಿಕ ಜಡ್ಜ್

0
391

ಭಾರತೀಯ ಮೂಲದ ನವೋಮಿ ಜಹಾಂಗೀರ್ ರಾವ್ ಕೊಲಂಬಿಯಾ ಸರ್ಕ್ಯುಟ್ ಕೋರ್ಟ್ ಆಫ್ ಅಪೀಲ್ಸ್​ನ ಜಡ್ಜ್ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ವಾಷಿಂಗ್ಟನ್: ಭಾರತೀಯ ಮೂಲದ ನವೋಮಿ ಜಹಾಂಗೀರ್ ರಾವ್ ಕೊಲಂಬಿಯಾ ಸರ್ಕ್ಯುಟ್ ಕೋರ್ಟ್ ಆಫ್ ಅಪೀಲ್ಸ್​ನ ಜಡ್ಜ್ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಅಮೆರಿಕದ ಸುಪ್ರೀಂಕೋರ್ಟ್ ಗಿಂತ ಕೆಳಹಂತದಲ್ಲಿರುವ ಪ್ರಭಾವಿ ಸರ್ಕ್ಯುಟ್ ಕೋರ್ಟ್​ನ ನ್ಯಾಯಾಧೀಶೆ ಸ್ಥಾನಕ್ಕೇರಿದ ಭಾರತೀಯ ಮೂಲದ ಎರಡನೇ ವ್ಯಕ್ತಿ ಎನಿಸಿಕೊಂಡಿದ್ದಾರೆ. ಈ ಹಿಂದೆ ಒಬಾಮ ಅಧಿಕಾರದಲ್ಲಿದ್ದಾಗ ಭಾರತೀಯ ಮೂಲದ ಶ್ರೀನಿವಾಸನ್ ಈ ಸ್ಥಾನಕ್ಕೇರಿದ್ದರು. 45 ವರ್ಷದ ನವೋಮಿ ಮಂಗಳವಾರ ಶ್ವೇತಭವನದ ರೂಸ್​ವೆಲ್ಟ್ ರೂಂನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮ್ಮುಖದಲ್ಲಿ ಬೈಬಲ್ ಸಾಕ್ಷಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇವರು ವಿವಾದಿತ ನ್ಯಾಯಮೂರ್ತಿ ಬ್ರೆಟ್ ಕವನಾಗ್ ಸ್ಥಾನ ತುಂಬಲಿದ್ದಾರೆ.

ಭಾರತೀಯ ಮೂಲದ ವೈದ್ಯೆ ಜೆರಿನ್ ರಾವ್ ಮತ್ತು ಜಹಾಂಗೀರ್ ನಾರಿಯೊಶಾಂಗ್ ಪುತ್ರಿ ನವೋಮಿ ರಾವ್ ಅವರನ್ನು ಕಳೆದ ನವೆಂಬರ್​ನಲ್ಲಿಯೇ ಆಯ್ಕೆ ಮಾಡಲಾಗಿತ್ತು. ಆದರೆ ಇತ್ತೀಚೆಗಷ್ಟೇ ಇವರ ಆಯ್ಕೆಗೆ ಅಮೆರಿಕ ಸಂಸತ್ತಿನಲ್ಲಿ ಸಮ್ಮತಿ ಸಿಕ್ಕಿದೆ. ಇದಕ್ಕೂ ಮೊದಲು ಇವರು ಆಫೀನ್ ಆಫ್ ಇನ್ಪಮೇಷನ್ ಆಂಡ್ ರೆಗ್ಯುಲೇಟರಿ ಅಫೇರ್ಸ್(ಒಐಆರ್​ಎ)ನಲ್ಲಿ ಆಡಳಿತಾಧಿಕಾರಿಯಾಗಿದ್ದರು. ಆಂಟೋನಿನ್ ಸ್ಕಾಲಿಯ ಲಾ ಸ್ಕೂಲ್, ಜಾರ್ಜ್ ಮಾಸನ್ ಯೂನಿವರ್ಸಿಟಿನಲ್ಲಿ ಸ್ಟ್ರಕ್ಚರಲ್ ಕಾನ್​ಸ್ಟಿಟ್ಯೂಷನಲ್ ಲಾ, ಅಡ್ಮಿನಿಸ್ಟ್ರೇಟಿವ್ ಲಾದ ಪ್ರಾಧ್ಯಾಪಕರಾಗಿದ್ದರು.