ಭಾರತದ 4 ನಗರದಲ್ಲಿ ತೀವ್ರ ನೀರು ಕೊರತೆ : (ಜಾಗತಿಕ ನೀರು ನಿರ್ವಹಣಾ ವಿಭಾಗದ ಅಧ್ಯಯನ ವರದಿ)

0
28

ಜಾಗತಿಕವಾಗಿ ಅತೀವ ನೀರಿನ ಅಭಾವ ಇರುವ 20 ನಗರಗಳ ಪೈಕಿ ಭಾರತದ ನಾಲ್ಕು ಮೆಟ್ರೋಪಾಲಿಟನ್ ಸಿಟಿಗಳಿದ್ದು, ಮೊದಲೆರಡು ಸ್ಥಾನಗಳಲ್ಲಿ ಚೆನ್ನೈ ಮತ್ತು ಕೋಲ್ಕತ ಇವೆ. ಮುಂಬೈ ಹಾಗೂ ದೆಹಲಿ ಕ್ರಮವಾಗಿ 11 ಮತ್ತು 15 ಸ್ಥಾನದಲ್ಲಿ ಗುರುತಿಸಿಕೊಂಡಿವೆ. ವರ್ಲ್ಡ್ ವೈಲ್ಡ್​ಲೈಫ್ ಫಂಡ್ (ಡಬ್ಲ್ಯುಡಬ್ಲ್ಯುಎಫ್)ಜಾಗತಿಕ ನೀರು ನಿರ್ವಹಣಾ ವಿಭಾಗ 2018ರಲ್ಲಿ ವಿಶ್ವದಲ್ಲಿ 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ 400 ನಗರಗಳಲ್ಲಿ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದೆ.

ನವದೆಹಲಿ: ಜಾಗತಿಕವಾಗಿ ಅತೀವ ನೀರಿನ ಅಭಾವ ಇರುವ 20 ನಗರಗಳ ಪೈಕಿ ಭಾರತದ ನಾಲ್ಕು ಮೆಟ್ರೋಪಾಲಿಟನ್ ಸಿಟಿಗಳಿದ್ದು, ಮೊದಲೆರಡು ಸ್ಥಾನಗಳಲ್ಲಿ ಚೆನ್ನೈ ಮತ್ತು ಕೋಲ್ಕತ ಇವೆ. ಮುಂಬೈ ಹಾಗೂ ದೆಹಲಿ ಕ್ರಮವಾಗಿ 11 ಮತ್ತು 15 ಸ್ಥಾನದಲ್ಲಿ ಗುರುತಿಸಿಕೊಂಡಿವೆ. ವರ್ಲ್ಡ್ ವೈಲ್ಡ್​ಲೈಫ್ ಫಂಡ್ (ಡಬ್ಲ್ಯುಡಬ್ಲ್ಯುಎಫ್)ಜಾಗತಿಕ ನೀರು ನಿರ್ವಹಣಾ ವಿಭಾಗ 2018ರಲ್ಲಿ ವಿಶ್ವದಲ್ಲಿ 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ 400 ನಗರಗಳಲ್ಲಿ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದೆ.

ಚೆನ್ನೈನಲ್ಲಿ 11 ಲಕ್ಷ ಜನರು ನೀರಿಲ್ಲದೆ ಪರದಾಡುತ್ತಿದ್ದಾರೆ. ಈ ಪಟ್ಟಣದಲ್ಲಿ ಹಿಂದಿನ ವರ್ಷಕ್ಕಿಂತ ನೀರಿನ ಅಭಾವ ಒಂದು ಹಂತ ಕೆಳಕ್ಕೆ ಇಳಿದಿದೆ. ಕುಡಿಯುವ ನೀರಿನ ಬಗ್ಗೆ ತೆಗೆದುಕೊಳ್ಳಬೇಕಾದ ಕನಿಷ್ಠ ಕ್ರಮಗಳನ್ನು ತೆಗೆದುಕೊಳ್ಳದಿದ್ದರಿಂದ ಈಗ ಎಲ್ಲ ಜಲಾಶಯಗಳು ತಳ ಮುಟ್ಟಿವೆ. ಆಶ್ಚರ್ಯಕರ ಸಂಗತಿಯೆಂದರೆ ಕೆಲ ವರ್ಷಗಳ ಹಿಂದೆ ಚೆನ್ನೈ ನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ 1.80 ಲಕ್ಷ ಜನರನ್ನು ಸ್ಥಳಾಂತರಿಸಲಾಗಿತ್ತು. ಸುಮಾರು 500 ಜನರು ಮೃತಪಟ್ಟಿದ್ದರು. ಆದರೆ, ಕೇವಲ ನಾಲ್ಕು ವರ್ಷಗಳಲ್ಲಿ ಚೆನ್ನೈ ಒಣ ಪ್ರದೇಶವಾಗಿದೆ ಎಂದು ಡಬ್ಲ್ಯೂಡಬ್ಲ್ಯೂಎಫ್​ನ ಅಧಿಕಾರಿ ಅಲೆಕ್ಸಸ್ ಮೊರ್ಗನ್ ಹೇಳಿದ್ದಾರೆ.

ಭಾರತದಲ್ಲಿ ಬಹುತೇಕ ನಗರಗಳು ದೊಡ್ಡ ನದಿಗಳ ತಟದಲ್ಲಿವೆ. ಆದರೆ, ನದಿಗಳ ಸಮರ್ಪಕ ನಿರ್ವಹಣೆ ಇಲ್ಲದಿದ್ದರಿಂದ ನೀರಿನ ಪರಿಸ್ಥಿತಿ ದುರ್ಬಲವಾಗುತ್ತಿವೆ. 1970ರಿಂದ ಇಲ್ಲಿಯವರೆಗೆ ಶೇ.35 ರಷ್ಟು ತೇವಯುತ ಪ್ರದೇಶ ಕಡಿಮೆಯಾಗಿದ್ದು, ಅರಣ್ಯ ನಾಶಕ್ಕಿಂತ ಮೂರು ಪಟ್ಟು ವೇಗದಲ್ಲಿ ಭೂಮಿ ತೇವಯುತ ಪ್ರದೇಶ ಕಳೆದುಕೊಳ್ಳುತ್ತಿದೆ ಎಂದು ಅಲೆಕ್ಸಸ್ ಆಂತಕ ವ್ಯಕ್ತಪಡಿಸಿದ್ದಾರೆ.

ನೀರಿಲ್ಲದ ಮೊದಲ ಹತ್ತು ನಗರಗಳು

ಚೆನ್ನೈ ಮತ್ತು ಕೋಲ್ಕತ (ಭಾರತ), ಇಸ್ತಾಂಬುಲ್ (ಟರ್ಕಿ), ಚಾಂಗ್ಡು (ಚೀನಾ), ಬ್ಯಾಂಕಾಕ್, (ಥಾಯ್ಲೆಂಡ್), ಟೆಹರಾನ್ (ಇರಾನ್), ಜಕಾರ್ತ (ಇಂಡೋನೇಷ್ಯಾ), ಲಾಸ್​ಏಂಜಲೀಸ್ (ಅಮೆರಿಕ), ತಿಯಾಂಜಿನ್ (ಚೀನಾ), ಕೈರೊ (ಈಜಿಪ್ಟ್)