ಭಾರತದ ಸಾಲಿಸಿಟರ್​ ಜನರಲ್​ ಆಗಿ “ತುಷಾರ್​ ಮೆಹ್ತಾ” ನೇಮಕ

0
761

ಕಳೆದ ವರ್ಷ ಅಕ್ಟೋಬರ್​ನಿಂದ ತೆರವಾಗಿದ್ದ ಭಾರತದ ಸಾಲಿಸಿಟರ್​ ಜನರಲ್​ ಸ್ಥಾನಕ್ಕೆ ಹೆಚ್ಚುವರಿ ಸಾಲಿಸಿಟರ್​ ಜನರಲ್​ ಆಗಿದ್ದ ತುಷಾರ್​ ಮೆಹ್ತಾ ಅವರನ್ನು ನೇಮಿಸಲಾಗಿದೆ.

ನವದೆಹಲಿ: ಕಳೆದ ವರ್ಷ ಅಕ್ಟೋಬರ್​ನಿಂದ ತೆರವಾಗಿದ್ದ ಭಾರತದ ಸಾಲಿಸಿಟರ್​ ಜನರಲ್​ ಸ್ಥಾನಕ್ಕೆ ಹೆಚ್ಚುವರಿ ಸಾಲಿಸಿಟರ್​ ಜನರಲ್​ ಆಗಿದ್ದ ತುಷಾರ್​ ಮೆಹ್ತಾ ಅವರನ್ನು ನೇಮಿಸಲಾಗಿದೆ.

ಹಿರಿಯ ವಕೀಲರಾಗಿದ್ದ ತುಷಾರ್ ಜೂನ್​ 30, 2020ರ ವರೆಗೆ ಅಧಿಕಾರದಲ್ಲಿರಲಿದ್ದಾರೆ. ವೈಯಕ್ತಿಕ ಕಾರಣಗಳಿಂದ ರಂಜಿತ್​ ಕುಮಾರ್​ ಅವರು ಸಾಲಿಸಿಟರ್​ ಹುದ್ದೆಗೆ ದಿಢೀರ್​ ರಾಜೀನಾಮೆ ನೀಡಿದಾಗಿನಿಂದಲೂ ಈ ಹುದ್ದೆ ಖಾಲಿಯಾಗಿತ್ತು.

2014ರಿಂದ ಅಂದರೆ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮೆಹ್ತಾ ದೇಶದ ಹೆಚ್ಚುವರಿ ಸಾಲಿಸಿಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. (ಏಜೆನ್ಸೀಸ್​)