ಭಾರತದ ರಫ್ತು ವಹಿವಾಟು ಹೆಚ್ಚಳ

0
45

ಎಂಜಿನಿಯರಿಂಗ್‌, ಔಷಧಿ ಮತ್ತು ರಾಸಾಯನಿಕ ವಲಯಗಳ ಉತ್ತಮ ಕೊಡುಗೆಯ ಕಾರಣಕ್ಕೆ ಏಪ್ರಿಲ್‌ ತಿಂಗಳಲ್ಲಿ ರಫ್ತು ವಹಿವಾಟು ಶೇ 5.17ರಷ್ಟು ಏರಿಕೆ ಕಂಡಿದೆ.

ನವದೆಹಲಿ : ಎಂಜಿನಿಯರಿಂಗ್‌, ಔಷಧಿ ಮತ್ತು ರಾಸಾಯನಿಕ ವಲಯಗಳ ಉತ್ತಮ ಕೊಡುಗೆಯ ಕಾರಣಕ್ಕೆ ಏಪ್ರಿಲ್‌ ತಿಂಗಳಲ್ಲಿ ರಫ್ತು ವಹಿವಾಟು ಶೇ 5.17ರಷ್ಟು ಏರಿಕೆ ಕಂಡಿದೆ.

 1.73 ಲಕ್ಷ ಕೋಟಿಗಳಷ್ಟು ರಫ್ತು ವಹಿವಾಟು ನಡೆದಿದ್ದರೆ, 2.65 ಲಕ್ಷ ಕೋಟಿಗಳಷ್ಟು ಮೊತ್ತದ ಸರಕುಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಆಮದು ಪ್ರಮಾಣವು 2017ರ ಇದೇ ಅವಧಿಯಲ್ಲಿನ ವಹಿವಾಟಿಗೆ ಹೋಲಿಸಿದರೆ ಶೇ 4.6ರಷ್ಟು ಹೆಚ್ಚಳವಾಗಿದೆ.

ರಫ್ತು ಮತ್ತು ಆಮದು (ವ್ಯಾಪಾರ ಕೊರತೆ) ಅಂತರವು  91,790 ಕೋಟಿಗಳಷ್ಟಾಗಿದೆ. 2017ರ ಏಪ್ರಿಲ್‌ನಲ್ಲಿ ಇದು  88,708 ಕೋಟಿಗಳಷ್ಟಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ತೈಲ ಆಮದು ಪ್ರಮಾಣವು ಶೇ 41ರಷ್ಟು ಹೆಚ್ಚಳವಾಗಿದೆ. ಇದರ ಒಟ್ಟಾರೆ ಮೊತ್ತ  69,680 ಕೋಟಿಗಳಷ್ಟಿದೆ. ಚಿನ್ನದ ಆಮದು ಶೇ 33 ರಷ್ಟು ಕಡಿಮೆಯಾಗಿದೆ. ಇದರ ಮೊತ್ತ  17,286 ಕೋಟಿಗಳಷ್ಟಿದೆ.

ಮಾರ್ಚ್‌ ತಿಂಗಳಲ್ಲಿನ ಸೇವಾ ರಫ್ತು ಪ್ರಮಾಣವು ( 1.12 ಲಕ್ಷ ಕೋಟಿ) ಶೇ 7.16 ರಷ್ಟು ಏರಿಕೆ ಕಂಡಿದೆ. ಸೇವೆಗಳ ಆಮದು (  68,340 ಕೋಟಿ) ಶೇ 1.35ರಷ್ಟು ಹೆಚ್ಚಳ ದಾಖಲಿಸಿದೆ. ಸೇವಾ ವಲಯದ ವ್ಯಾಪಾರದಲ್ಲಿ   43,550 ಕೋಟಿಗಳ ಉಳಿತಾಯ ಕಂಡು ಬಂದಿದೆ.
*
ರಫ್ತು ವಹಿವಾಟು ಉತ್ತೇಜನಕಾರಿಯಾಗಿಲ್ಲ. ಎಂಎಸ್‌ಎಂಇ ವಲಯದ ವಹಿವಾಟು ನಿರಾಶಾದಾಯಕವಾಗಿದೆ.
-ಗಣೇಶ್‌ ಕುಮಾರ್‌ ಗುಪ್ತ, ರಫ್ತು ವಹಿವಾಟುದಾರರ ಒಕ್ಕೂಟದ ಅಧ್ಯಕ್ಷ