ಭಾರತದ ಮನಿಕಾ ಬಾತ್ರಾಗೆ ಐಟಿಟಿಎಫ್ ಪ್ರಶಸ್ತಿ

0
694

ಭಾರತದ ಮನಿಕಾ ಬಾತ್ರಾ ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಸಂಸ್ಥೆಯಿಂದ (ಐಟಿಟಿಎಫ್) ನೀಡಲಾಗುವ ‘ಬ್ರೇಕ್​ತ್ರೂ ಟೇಬಲ್ ಟೆನಿಸ್ ಸ್ಟಾರ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನವದೆಹಲಿ: ಭಾರತದ ಮನಿಕಾ ಬಾತ್ರಾ ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಸಂಸ್ಥೆಯಿಂದ (ಐಟಿಟಿಎಫ್) ನೀಡಲಾಗುವ ‘ಬ್ರೇಕ್​ತ್ರೂ ಟೇಬಲ್ ಟೆನಿಸ್ ಸ್ಟಾರ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮನಿಕಾ ಈ ಪ್ರಶಸ್ತಿ ಪಡೆದ ಮೊದಲ ಭಾರತೀಯರೆನಿಸಿದ್ದಾರೆ. 23 ವರ್ಷದ ದೆಹಲಿ ಆಟಗಾರ್ತಿ ಮನಿಕಾ ಬಾತ್ರಾ ಹಾಲಿ ವರ್ಷ ಕಾಮನ್ವೆಲ್ತ್ ಗೇಮ್ಸ್​ನಲ್ಲಿ 2 ಸ್ವರ್ಣ ಮತ್ತು ತಲಾ 1 ಬೆಳ್ಳಿ, ಕಂಚಿನ ಪದಕ, ಏಷ್ಯಾಡ್​ನಲ್ಲಿ ಕಂಚು ಗೆದ್ದಿದ್ದಾರೆ. ಜತೆಗೆ ಜೀವನಶ್ರೇಷ್ಠ 52ನೇ ರ್ಯಾಂಕ್​ಗೂ ಪ್ರಗತಿ ಕಂಡ ಸಾಧನೆಗಳಿಗಾಗಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದರು.

2018ನೇ ವರ್ಷ ನನ್ನ ಪಾಲಿಗೆ ಅವಿಸ್ಮರಣೀಯ’ ಎಂದು ಮನಿಕಾ ಇಂಚೋನ್​ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.