ಭಾರತದ ಪುಟ್ ಬಾಲ್ ತಂಡಕ್ಕೆ ಮುಖ್ಯ ಕೋಚ್ ಆಗಿ ಡೆರಿಕ್‌ ಪೆರೇರಾ ನೇಮಕ

0
511

ಡೆರಿಕ್‌ ಪೆರೇರಾ ಅವರು ಬುಧವಾರ ಭಾರತದ 23 ವರ್ಷದೊಳಗಿನವರ ಫುಟ್‌ಬಾಲ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕವಾಗಿದ್ದಾರೆ.

ನವದೆಹಲಿ (ಪಿಟಿಐ): ಡೆರಿಕ್‌ ಪೆರೇರಾ ಅವರು ಬುಧವಾರ ಭಾರತದ 23 ವರ್ಷದೊಳಗಿನವರ ಫುಟ್‌ಬಾಲ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕವಾಗಿದ್ದಾರೆ.

ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ (ಐಎಸ್‌ಎಲ್‌) ಆಡುವ ಎಫ್‌ಸಿ ಗೋವಾ ತಂಡದ ತಾಂತ್ರಿಕ ನಿರ್ದೇಶಕರಾಗಿರುವ ಪೆರೇರಾ, ಮಾರ್ಚ್‌ 2ರಂದು ಗೋವಾದಲ್ಲಿ ನಡೆಯುವ ಪೂರ್ವ ಸಿದ್ಧತಾ ಶಿಬಿರದಲ್ಲಿ ತಂಡಕ್ಕೆ ತರಬೇತಿ ನೀಡಲಿದ್ದಾರೆ.

ಪೆರೇರಾ ಮಾರ್ಗದರ್ಶನದಲ್ಲಿ ತಂಡ ಏಷ್ಯನ್‌ ಫುಟ್‌ಬಾಲ್‌ ಕಾನ್ಫೆಡರೇಷನ್‌ (ಎಎಫ್‌ಸಿ) ಅರ್ಹತಾ ಟೂರ್ನಿಯಲ್ಲಿ ಉತ್ತಮ ಸಾಮರ್ಥ್ಯ ತೋರುವ ನಿರೀಕ್ಷೆ ಇದೆ. ಈ ಟೂರ್ನಿ ಮಾರ್ಚ್‌ 22ರಿಂದ ಉಜ್ಬೆಕಿಸ್ತಾನದ ತಾಷ್ಕೆಂಟ್‌ನಲ್ಲಿ ನಡೆಯಲಿದೆ.