ಭಾರತದ ನೌಕಾಪಡೆ ಸೇರಲಿವೆ 56 ಯುದ್ಧನೌಕೆ–ಸಬ್‌ಮೆರಿನ್‌ (ಚೀನಾದ ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯುವ ಉದ್ದೇಶ)

0
402

ಭಾರತೀಯ ನೌಕಾಪಡೆಗೆ ಶೀಘ್ರದಲ್ಲಿಯೇ 56 ಯುದ್ಧನೌಕೆಗಳು ಮತ್ತು ಸಬ್‌ಮೆರಿನ್‌ಗಳು ಸೇರ್ಪಡೆಯಾಗಲಿವೆ’ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಸುನೀಲ್‌ ಲಾಂಬಾ ಡಿಸೆಂಬರ್ 3 ರ ಸೋಮವಾರ ಹೇಳಿದ್ದಾರೆ.

ನವದೆಹಲಿ (ಪಿಟಿಐ): ‘ಭಾರತೀಯ ನೌಕಾಪಡೆಗೆ ಶೀಘ್ರದಲ್ಲಿಯೇ 56 ಯುದ್ಧನೌಕೆಗಳು ಮತ್ತು ಸಬ್‌ಮೆರಿನ್‌ಗಳು ಸೇರ್ಪಡೆಯಾಗಲಿವೆ’ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಸುನೀಲ್‌ ಲಾಂಬಾ  ಡಿಸೆಂಬರ್ 3   ರ ಸೋಮವಾರ ಹೇಳಿದ್ದಾರೆ. 

‘ಯುದ್ಧನೌಕೆಗಳ ಸೇರ್ಪಡೆಯಿಂದ ನೌಕಾಪಡೆಯ ಸಾಮರ್ಥ್ಯ ಮತ್ತಷ್ಟು ಹೆಚ್ಚಲಿದೆ’ ಎಂದು ಅವರು ತಿಳಿಸಿದ್ದಾರೆ. 

‘ಕರಾವಳಿ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ 2.5 ಲಕ್ಷ ಮೀನುಗಾರಿಕೆ ದೋಣಿಗಳಿಗೆ ಸ್ವಯಂಚಾಲಿತ ಗುರುತಿನ ವ್ಯವಸ್ಥೆ ಕಲ್ಪಿಸುವ ಕಾರ್ಯ ನಡೆಯುತ್ತಿದೆ’ ಎಂದೂ ಹೇಳಿದ್ದಾರೆ. 

ರಿಲಯನ್ಸ್‌ ಎಂಜಿನಿಯರಿಂಗ್‌ ಲಿಮಿಟೆಡ್‌ ಕಂಪನಿಯಿಂದ ಐದು ಸಾಗರೋತ್ತರ ಗಸ್ತು ವಾಹನ ಖರೀದಿ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ‘ಈ ಬಗ್ಗೆ ಒಪ್ಪಂದ ಮಾಡಿಕೊಳ್ಳುವ ಕುರಿತು ಮಾತುಕತೆ ನಡೆಯುತ್ತಿದೆ’ ಎಂದು ಲಾಂಬಾ ಹೇಳಿದ್ದಾರೆ.

ಮೂರು ವರ್ಷಗಳಲ್ಲಿ ವಿಮಾನವಾಹನ ನೌಕೆ:  ‘ಭಾರತವು ಇನ್ನು ಮೂರು ವರ್ಷಗಳಲ್ಲಿ ತನ್ನ ಮೂರನೇ ವಿಮಾನವಾಹನ ನೌಕೆಯ (ಏರ್‌ಕ್ರಾಫ್ಟ್‌ ಕ್ಯಾರಿಯರ್) ನಿರ್ಮಾಣ ಕಾರ್ಯ ಆರಂಭ ಮಾಡಲಿದೆ’ ಎಂದು ಲಾಂಬಾ ಹೇಳಿದ್ದಾರೆ. 

65,000 ಟನ್‌ ತೂಕದ ನೌಕೆ ಇದಾಗಿರಲಿದ್ದು, ಮುಂದಿನ ಏಳರಿಂದ ಹತ್ತು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ಅವರು ತಿಳಿಸಿದ್ದಾರೆ. 

ಸದ್ಯ, ನೌಕಾಪಡೆಯಲ್ಲಿ ‘ಐಎನ್‌ಎಸ್‌ ವಿಕ್ರಮಾದಿತ್ಯ’ ವಿಮಾನವಾಹನ ನೌಕೆ ಮಾತ್ರ ಕಾರ್ಯನಿರ್ವಹಿಸುತ್ತಿದೆ. ‘ವಿಕ್ರಾಂತ್‌’ ಸದ್ಯ ಕೊಚ್ಚಿನ್‌ ಬಂದರಿನಲ್ಲಿ ನಿರ್ಮಾಣವಾಗುತ್ತಿದ್ದು, 2020ರ ವೇಳೆಗೆ ಪ್ರಾಯೋಗಿಕವಾಗಿ ಕಾರ್ಯಾಚರಿಸುವ ನಿರೀಕ್ಷೆ ಇದೆ. 

# ಸದ್ಯ ನೌಕಾಪಡೆಯಲ್ಲಿರುವ ಯುದ್ದ ನೌಕೆಗಳು : 140

# ಸದ್ಯ ನೌಕಾಪಡೆಯಲ್ಲಿರುವ ಯುದ್ದ ವಿಮಾನಗಳು : 220

# ಸದ್ಯ ನಿರ್ಮಾಣ ಹಂತದಲ್ಲಿರುವ ಯುದ್ದ ನೌಕೆಗಳು : 32 (ನಿರ್ಮಾಣಕ್ಕೆ ತಗಲುವ ವೆಚ್ಚ 1.26 ಲಕ್ಷ ಕೋಟಿ )