ಭಾರತದ ಕೈ ತಪ್ಪಿದ “ಜೂ. ಡೇವಿಸ್ ಕಪ್ ಹಾಗೂ ಫೆಡ್ ಕಪ್ ಟೆನಿಸ್ ಟೂರ್ನಿ” ಆತಿಥ್ಯ

0
486

ಪುಲ್ವಾಮಾ ಭಯೋತ್ಪಾದಕರ ದಾಳಿ ಮತ್ತು ಬಾಲಾಕೋಟ್ ಏರ್​ಸ್ಟ್ರೈಕ್ ನಂತರ ಪಾಕಿಸ್ತಾನದ ಜತೆಗಿನ ರಾಜತಾಂತ್ರಿಕ ಸಂಬಂಧ ಇನ್ನಷ್ಟು ಹದಗೆಟ್ಟಿರುವುದರಿಂದ ಮುಂದಿನ ಜೂನಿಯರ್ ಡೇವಿಸ್ ಕಪ್ ಹಾಗೂ ಫೆಡ್ ಕಪ್ ಟೆನಿಸ್ ಟೂರ್ನಿಯ ಆತಿಥ್ಯ ಭಾರತದ ಕೈತಪ್ಪಿದೆ.

ನವದೆಹಲಿ: ಪುಲ್ವಾಮಾ ಭಯೋತ್ಪಾದಕರ ದಾಳಿ ಮತ್ತು ಬಾಲಾಕೋಟ್ ಏರ್​ಸ್ಟ್ರೈಕ್ ನಂತರ ಪಾಕಿಸ್ತಾನದ ಜತೆಗಿನ ರಾಜತಾಂತ್ರಿಕ ಸಂಬಂಧ ಇನ್ನಷ್ಟು ಹದಗೆಟ್ಟಿರುವುದರಿಂದ ಮುಂದಿನ ಜೂನಿಯರ್ ಡೇವಿಸ್ ಕಪ್ ಹಾಗೂ ಫೆಡ್ ಕಪ್ ಟೆನಿಸ್ ಟೂರ್ನಿಯ ಆತಿಥ್ಯ ಭಾರತದ ಕೈತಪ್ಪಿದೆ.

ಒಟ್ಟು 16 ತಂಡಗಳ ಪೈಕಿ ಪಾಕಿಸ್ತಾನ ಕೂಡ ಇರುವುದರಿಂದ ಅನಿವಾರ್ಯವಾಗಿ ಟೂರ್ನಿಯನ್ನು ಥಾಯ್ಲೆಂಡ್​ನ ಬ್ಯಾಂಕಾಕ್​ಗೆ ಸ್ಥಳಾಂತರಿಸಲಾಗಿದೆ. ದೆಹಲಿಯಲ್ಲಿ ಏಪ್ರಿಲ್ 15ರಿಂದ ಈ ಡೇವಿಸ್ ಕಪ್ ಟೂರ್ನಿ ನಿಗದಿಯಾಗಿತ್ತು. ‘ಟೂರ್ನಿ ಆಯೋಜನೆಗೆ ಭಾರತ ಸುರಕ್ಷಿತವಲ್ಲ ಎಂಬ ಕಾರಣಕ್ಕಾಗಿ ಅಲ್ಲ. ಉಭಯ ರಾಷ್ಟ್ರಗಳ ಸಂಬಂಧ ತೀರಾ ಹದಗೆಟ್ಟಿರುವುದರಿಂದ ಪ್ರತಿ ಸ್ಪರ್ಧಾ ತಂಡಗಳು ಗಲಿಬಿಲಿಯಲ್ಲಿರುವುದರಿಂದ ಸ್ಥಳಾಂತರಿಸಲಾಗುತ್ತಿದೆ. ಆತಿಥ್ಯ ಸ್ಥಳವನ್ನು ಬ್ಯಾಂಕಾಕ್​ಗೆ ಬದಲಾಯಿಸಲು ಭಾರತವೇ ನಿರ್ಧರಿಸಿತು ಎಂದು ಅಂತಾರಾಷ್ಟ್ರೀಯ ಟೆನಿಸ್ ಸಂಸ್ಥೆಯ(ಐಟಿಎಫ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.