ಭಾರತದ ಆರ್ಥಿಕ ಪ್ರಗತಿ ಶೇ 7.3ರಷ್ಟು ನಿರೀಕ್ಷೆ : ವಿಶ್ವ ಬ್ಯಾಂಕ್‌ ವರದಿ

0
716

ಭಾರತದ ಆರ್ಥಿಕತೆ (ಜಿಡಿಪಿ) 2018–19ರಲ್ಲಿ ಶೇ 7.3ರಷ್ಟು ಬೆಳವಣಿಗೆ ಕಾಣಲಿದ್ದು, ಚೀನಾವನ್ನು ಹಿಂದಿಕ್ಕಲಿದೆ ಎಂದು ವಿಶ್ವ ಬ್ಯಾಂಕ್‌ ಹೇಳಿದೆ.

ವಾಷಿಂಗ್ಟನ್‌ (ಪಿಟಿಐ): ಭಾರತದ ಆರ್ಥಿಕತೆ (ಜಿಡಿಪಿ) 2018–19ರಲ್ಲಿ ಶೇ 7.3ರಷ್ಟು ಬೆಳವಣಿಗೆ ಕಾಣಲಿದ್ದು, ಚೀನಾವನ್ನು ಹಿಂದಿಕ್ಕಲಿದೆ ಎಂದು ವಿಶ್ವ ಬ್ಯಾಂಕ್‌ ಹೇಳಿದೆ.

ಚೀನಾದ ಪ್ರಗತಿ ಶೇ 6.5ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ.

ಬಂಡವಾಳ ಹೂಡಿಕೆ ಮತ್ತು ಗ್ರಾಹಕರ ವೆಚ್ಚದಲ್ಲಿ ಏರಿಕೆ ಕಂಡುಬರುತ್ತಿದೆ. ಬ್ಯಾಂಕ್‌ಗಳಿಗೆ ಬಂಡವಾಳ ನೆರವು, ಜಿಎಸ್‌ಟಿಯಂತಹ ಸಾಂಸ್ಥಿಕ ಸುಧಾರಣಾ ಕ್ರಮಗಳಿಂದ ದೇಶಿ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಉತ್ತಮ ಪ್ರಗತಿ ಸಾಧಿಸಲಿದೆ.

ಜಿಎಸ್‌ಟಿ ಮತ್ತು ನೋಟು ರದ್ದತಿಯಿಂದ 2017ರಲ್ಲಿ ಭಾರತದ ಜಿಡಿಪಿ ಶೇ 6.7ರಷ್ಟು ಬೆಳವಣಿಗೆ ಕಂಡಿತ್ತು. ಇದು ಚೀನಾದ ಶೇ 6.9ರಷ್ಟು ಬೆಳವಣಿಗೆಗಿಂತಲೂ ಕಡಿಮೆಯಾಗಿತ್ತು. ಆದರೆ, 2018ರಲ್ಲಿ ಚೀನಾವನ್ನೂ ಹಿಂದಿಕ್ಕಿ ಭಾರತ ಮುಂದುವರಿಯಲಿದೆ ಎಂದು ವಿಶ್ವಬ್ಯಾಂಕ್‌ ಹೇಳಿದೆ.

ಜಿಎಸ್‌ಟಿಯಿಂದ ಅನೌಪಚಾರಿಕ ವಲಯಗಳು ಔಪಚಾರಿಕ ವಲಯಗಳಾಗಿ ಬದಲಾಗಲು ಉತ್ತೇಜನ ದೊರೆಯುತ್ತಿದೆ. ಶೇ 7ರಷ್ಟು ಪ್ರಗತಿ ಸಾಧಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ. ಸ್ವಲ್ಪ ಪ್ರಯತ್ನ ಪಟ್ಟರೆ ಅದಕ್ಕಿಂತಲೂ ಹೆಚ್ಚಿನ ಬೆಳವಣಿಗೆ ಸಾಧಿಸಬಹುದು.