ಭಾರತದ ಆರ್ಥಿಕತೆ ಏರುಗತಿ :ಐ.ಎಂ.ಎಫ್ ವರದಿ

0
534

ಭಾರತದ ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ) 2019-20ನೇ ಸಾಲಿನಲ್ಲಿ ಶೇ. 7.5 ಮತ್ತು 2020-21ರಲ್ಲಿ ಶೇ. 7.7ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಈ ಮೂಲಕ ವಿಶ್ವದಲ್ಲಿ ಅತಿ ವೇಗವಾಗಿ ಆರ್ಥಿಕ ಅಭಿವೃದ್ಧಿ ಕಾಣುತ್ತಿರುವ ರಾಷ್ಟ್ರದ ಸ್ಥಾನಮಾನವನ್ನು ಭಾರತ ಉಳಿಸಿಕೊಳ್ಳಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ವರದಿ ಹೇಳಿದೆ.

ನವದೆಹಲಿ: ಭಾರತದ ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ) 2019-20ನೇ ಸಾಲಿನಲ್ಲಿ ಶೇ. 7.5 ಮತ್ತು 2020-21ರಲ್ಲಿ ಶೇ. 7.7ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಈ ಮೂಲಕ ವಿಶ್ವದಲ್ಲಿ ಅತಿ ವೇಗವಾಗಿ ಆರ್ಥಿಕ ಅಭಿವೃದ್ಧಿ ಕಾಣುತ್ತಿರುವ ರಾಷ್ಟ್ರದ ಸ್ಥಾನಮಾನವನ್ನು ಭಾರತ ಉಳಿಸಿಕೊಳ್ಳಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ವರದಿ ಹೇಳಿದೆ.

ಐಎಂಎಫ್ ಮುಖ್ಯಸ್ಥೆ, ಮೈಸೂರು ಮೂಲದ ಗೀತಾ ಗೋಪಿನಾಥ್ ವಿಶ್ವ ಆರ್ಥಿಕ ಅವಲೋಕನ ವರದಿಯನ್ನು ಬಿಡುಗಡೆ ಮಾಡಿದ್ದಾರೆ.

ಭಾರತದಲ್ಲಿ ತೈಲ ದರ ಇಳಿಕೆ, ಈ ಹಿಂದೆ ಆರ್ಥಿಕ ಹಿನ್ನಡೆಗೆ ಇದ್ದ ಅಡೆತಡೆ ದೂರವಾಗುತ್ತಿರುವುದು ಮತ್ತು ಹಣದುಬ್ಬರ ತಗ್ಗಿರುವುದರಿಂದ ಜಿಡಿಪಿ ಗಣನೀಯವಾಗಿ ಹೆಚ್ಚುತ್ತಿದೆ ಎಂದು ವರದಿ ವಿಶ್ಲೇಷಿಸಿದೆ.

ಚೀನಾ ಜಿಡಿಪಿ ಕುಸಿತ: ಇದೇ ವೇಳೆ ಭಾರತದ ಪ್ರತಿಸ್ಪರ್ಧಿ ರಾಷ್ಟ್ರವಾದ ಚೀನಾ ಜಿಡಿಪಿ ಕುಸಿತದ ಹಾದಿ ಹಿಡಿದಿದೆ. ಕಳೆದ ವರ್ಷ ಶೇ. 6.6 ಇದ್ದ ಜಿಡಿಪಿ, 2019ರಲ್ಲಿ 6.2ಕ್ಕೆ ಇಳಿಯಲಿದೆೆ. 2020ರಲ್ಲೂ ಇದೇ ಮಟ್ಟದಲ್ಲಿ ಚೀನಾ ಜಿಡಿಪಿ ಇರುವ ಸಾಧ್ಯತೆ ಇದೆ ಎಂದು ಐಎಂಎಫ್ ಹೇಳಿದೆ. -ಏಜೆನ್ಸೀಸ್