ಭಾರತದಲ್ಲಿ ಸೆಪ್ಟೆಂಬರ್ 15ರಂದು ಎಂಜಿನಿಯರ್ಸ್ ದಿನಾಚರಣೆ: ಏಕೆ ಗೊತ್ತಾ ?

0
575

ಇಂದು ಭಾರತ ಕಂಡ ಶ್ರೇಷ್ಠ ಎಂಜಿನಿಯರ್ ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ 157ನೇ ಜನ್ಮದಿನ. ಈ ಹಿನ್ನೆಲೆ ದೇಶಾದ್ಯಂತ ಎಂಜಿನಿಯರಿಂಗ್ ಸಮುದಾಯ ಇಂದು ಎಂಜಿನಿಯರ್ಸ್ ಡೇ ಅನ್ನು ಆಚರಿಸಲಾಗುತ್ತಿದೆ.

ಹೊಸದಿಲ್ಲಿ: ಇಂದು(2018 ರ ಸೆಪ್ಟೆಂಬರ್ 15 ರಂದು) ಭಾರತ ಕಂಡ ಶ್ರೇಷ್ಠ ಎಂಜಿನಿಯರ್ ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ 157ನೇ ಜನ್ಮದಿನ. ಈ ಹಿನ್ನೆಲೆ ದೇಶಾದ್ಯಂತ ಎಂಜಿನಿಯರಿಂಗ್ ಸಮುದಾಯ ಇಂದು ಎಂಜಿನಿಯರ್ಸ್ ಡೇ ಅನ್ನು ಆಚರಿಸಲಾಗುತ್ತಿದೆ. 

ಮೋಕ್ಷಗುಂಡಂ ವಿಶ್ವೇಶ್ವರಯ್ಯ ಸೆಪ್ಟೆಂಬರ್ 15, 1861ರಲ್ಲಿ ಚಿಕ್ಕಬಳ್ಳಾಪುರ ಬಳಿಯ ಮುದ್ದೇನಹಳ್ಳಿಯಲ್ಲಿ ಜನಿಸಿದರು. ನಂತರ ಭಾರತದ ಅತ್ಯಂತ ಪ್ರಸಿದ್ಧ ಸಿವಿಲ್ ಎಂಜಿನಿಯರ್, ಡ್ಯಾಮ್‌ ನಿರ್ಮಾತೃ, ಅರ್ಥಶಾಸ್ತ್ರಜ್ಞ, ಮುತ್ಸದ್ಧಿ, ಹಾಗೂ 20ನೇ ಶತಮಾನದ ಭಾರತವನ್ನು ಕಟ್ಟುವಲ್ಲಿ ಮುಂಚೂಣಿ ನಾಯಕ ಎನಿಸಿಕೊಂಡಿದ್ದಾರೆ. 

ಇನ್ನು, 1912ರಿಂದ 1918ರವರೆಗೆ ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿದ್ದರು. ಅಲ್ಲದೆ, ಮೈಸೂರಿನ ಕೃಷ್ಣರಾಜಸಾಗರ ( ಕೆ ಆರ್‌ ಎಸ್‌ ) ಡ್ಯಾಂನ ಚೀಫ್‌ ಎಂಜಿನಿಯರ್ ಆಗಿ ಕೆಲಸ ಮಾಡಿದ್ದು, ಡ್ಯಾಂ ಕಟ್ಟುವಲ್ಲಿ ಅಗ್ರಗಣ್ಯ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅಲ್ಲದೆ, ಹೈದರಾಬಾದ್‌ ನಗರದಲ್ಲಿ ಪ್ರವಾಹವನ್ನು ತಡೆಗಟ್ಟುವ ವ್ಯವಸ್ಥೆ ಮಾಡುವಲ್ಲಿಯೂ ಚೀಫ್‌ ಡಿಸೈನರ್ ಆಗಿ ವಿಶ್ವೇಶ್ವರಯ್ಯನವರು ಕೆಲಸ ಮಾಡಿದ್ದರು. 

ಹೀಗಾಗಿ ಸಮಾಜಕ್ಕೆ ಅವರ ಅನನ್ಯ ಕೊಡುಗೆಯನ್ನು ನೆನೆದು ಭಾರತ ಸರಕಾರ 1955ರಲ್ಲಿ ಅವರಿಗೆ ಭಾರತ ರತ್ನ ಗೌರವವನ್ನು ನೀಡಿದೆ. ಅಲ್ಲದೆ, ಕಿಂಗ್ ಐದನೇ ಜಾರ್ಜ್ ಅವರಿಗೆ ಬ್ರಿಟಿಷ್ ನೈಟ್‌ಹುಡ್ ಗೌರವ ನೀಡಿತು. ಹೀಗಾಗಿ, ಅವರ ಹೆಸರಿನ ಮುಂದೆ ಸರ್‌ ಎಂದು ಸೇರಿಸಿಕೊಂಡಿದೆ. ಅಲ್ಲದೆ, ಸರ್. ಎಂ ವಿಶ್ವೇಶ್ವರಯ್ಯನವರ ಹುಟ್ಟುಹಬ್ಬವನ್ನು ಭಾರತದಲ್ಲಿ ಎಂಜಿನಿಯರ್ಸ್ ಡೇ ಎಂದು ಆಚರಣೆ ಮಾಡಲಾಗುತ್ತದೆ. ಜತೆಗೆ, ಮೈಸೂರು ರಾಜ್ಯವನ್ನು ಮಾದರಿ ರಾಜ್ಯವನ್ನಾಗಿಸಿದರು. 

ವಿಶ್ವೇಶ್ವರಯ್ಯನವರು ಡ್ಯಾಂ ನಿರ್ಮಾಣಕ್ಕೆ, ನೀರಿನ ಸಂಪನ್ಮೂಳಕ್ಕೆ ತಮ್ಮ ಕೊಡುಗೆ ನೀಡುವ ಮೂಲಕ ಜಗತ್‌ ಪ್ರಸಿದ್ಧವಾಗಿದ್ದಾರೆ. ದೇಶಾದ್ಯಂತ ಡ್ಯಾಂ ನಿರ್ಮಾಣ ಹಾಗೂ ಅಣೆಕಟ್ಟುಗಳ ಏಕೀಕರಣಕ್ಕೆ ಜವಾಬ್ದಾರಿಯಾಗಿದ್ದಾರೆ. ಇನ್ನು, ಡ್ಯಾಂಗಳು ತುಂಬಿದ ಬಳಿಕ ಹೆಚ್ಚುವರಿ ನೀರನ್ನು ಹೊರಹೋಗದಂತೆ ತಡೆಯಲು ಸ್ವಯಂಚಾಲಿತ ಬಾಗಿಲುಗಳ ವ್ಯವಸ್ಥೆಯನ್ನು ಮೊದಲ ಬಾರಿ ಜಾರಿಗೆ ತಂದರು. ಈ ಮೂಲಕ ಬ್ಲಾಕ್‌ ಸಿಸ್ಟಂ ಅನ್ನು ಕಂಡುಹಿಡಿದ ಖ್ಯಾತಿಗೂ ಅವರು ಪಾತ್ರರಾಗಿದ್ದಾರೆ.