ಭಾರತದಲ್ಲಿ ಮೊಬೈಲ್‌ ಹಣಕಾಸು ಸೇವೆ ಬಳಸುವವರು ಶೇ 1 ಮಾತ್ರ : ನೀತಿ ಆಯೋಗದ ಸಮೀಕ್ಷೆ

0
500

ಭಾರತವನ್ನು ನಗದುರಹಿತ ಅರ್ಥವ್ಯವಸ್ಥೆ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳುತ್ತಿದೆ. ಎರಡು ವರ್ಷಗಳ ಹಿಂದೆ ನಡೆಸಿದ ನೋಟು ರದ್ದತಿ ಕೂಡ ಇದರ ಭಾಗ ಎಂದು ಹೇಳಲಾಗುತ್ತಿದೆ. ಆದರೆ, ಇದು ವಾಸ್ತವ ಅಲ್ಲ ಎಂಬುದನ್ನು ನೀತಿ ಆಯೋಗದ ಸಮೀಕ್ಷೆ ಬಹಿರಂಗಪಡಿಸಿದೆ.

ನವದೆಹಲಿ: ಭಾರತವನ್ನು ನಗದುರಹಿತ ಅರ್ಥವ್ಯವಸ್ಥೆ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳುತ್ತಿದೆ. ಎರಡು ವರ್ಷಗಳ ಹಿಂದೆ ನಡೆಸಿದ ನೋಟು ರದ್ದತಿ ಕೂಡ ಇದರ ಭಾಗ ಎಂದು ಹೇಳಲಾಗುತ್ತಿದೆ. ಆದರೆ, ಇದು ವಾಸ್ತವ ಅಲ್ಲ ಎಂಬುದನ್ನು ನೀತಿ ಆಯೋಗದ ಸಮೀಕ್ಷೆ ಬಹಿರಂಗಪಡಿಸಿದೆ.

ಭಾರತದಲ್ಲಿ ಮೊಬೈಲ್‌ ಮೂಲಕ ಹಣಕಾಸು ವರ್ಗಾವಣೆ ಮಾಡುವವರ ಪ್ರಮಾಣ ಶೇ 1ರಷ್ಟು ಮಾತ್ರ. ಭಾರತಕ್ಕಿಂತ ಹಿಂದುಳಿದ ದೇಶಗಳಾದ ಬಾಂಗ್ಲಾದೇಶದಲ್ಲಿ ಈ ಪ್ರಮಾಣ ಶೇ 40ರಷ್ಟಿದ್ದರೆ, ತಾಂಜಾನಿಯಾದಲ್ಲಿ ಶೇ 61 ಮತ್ತು ಕೆನ್ಯಾದಲ್ಲಿ ಶೇ 81ರಷ್ಟಿದೆ. 

ಪಾಕಿಸ್ತಾನದಲ್ಲಿ ಮೊಬೈಲ್‌ ಹಣಕಾಸು ಸೇವೆ ಬಳಸುವವರ ಪ್ರಮಾಣ ಶೇ 9ರಷ್ಟಿದೆ.  ಭಾರತದಲ್ಲಿ ಮೊಬೈಲ್‌ ಹಣಕಾಸು ಸೇವೆ ಬಳಸುವವರ ಮಾಹಿತಿಯನ್ನು ನೀತಿ ಆಯೋಗ ಪ್ರಕಟಿಸಿದೆ. ಇದು 2016ರವರೆಗಿನ ಅಂಕಿ ಅಂಶಗಳನ್ನಷ್ಟೇ ಹೊಂದಿದೆ.  ನೋಟು ರದ್ದತಿ ಮತ್ತು ಭೀಮ್‌ ಆ್ಯಪ್‌ಗೆ ಚಾಲನೆ ಕೊಟ್ಟ ಬಳಿಕ ಮೊಬೈಲ್‌ ಹಣಕಾಸು ಸೇವೆ ಬಳಕೆ ಪ್ರಮಾಣ ಹೆಚ್ಚಾಗಿದೆ ಎಂದು ವರದಿ ಹೇಳಿದೆ. ಆದರೆ, ಈ ಬಗೆಗಿನ ಯಾವುದೇ ದತ್ತಾಂಶ ಕೊಟ್ಟಿಲ್ಲ.

ಜನವರಿಯಲ್ಲಿ 32.6 ಕೋಟಿ ವಹಿವಾಟು ಡಿಜಿಟಲ್‌ ವ್ಯಾಲೆಟ್‌ ಮೂಲಕ ನಡೆದಿದೆ. ಆದರೆ, ಜುಲೈಯಲ್ಲಿ ಅದು 32 ಕೋಟಿಗೆ ಇಳಿದಿದೆ ಎಂದು ಬೇರೊಂದು ಸಮೀಕ್ಷೆ ಹೇಳಿದೆ.