ಭಾರತದಲ್ಲಿ ನಡೆಯಲಿರುವ”ಹಾಕಿ ವಿಶ್ವಕಪ್ ಟೂರ್ನಿ”ಯಲ್ಲಿ ಪಾಕ್ ಸ್ಪರ್ಧೆ

0
602

ಪಾಕಿಸ್ತಾನ ಹಾಕಿ ತಂಡ, ಭಾರತದ ಆತಿಥ್ಯದಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಸ್ಪರ್ಧೆ ಮಾಡಲಿದೆ ಎಂದು ಪಾಕಿಸ್ತಾನ ಹಾಕಿ ಸಂಸ್ಥೆ (ಪಿಎಚ್​ಎಫ್) ಕಾರ್ಯದರ್ಶಿ ಹಾಗೂ ಮಾಜಿ ನಾಯಕ ಶಹಬಾಜ್ ಅಹ್ಮದ್ ಖಚಿತಪಡಿಸಿದ್ದಾರೆ.

ಚೆನ್ನೈ: ಪಾಕಿಸ್ತಾನ ಹಾಕಿ ತಂಡ, ಭಾರತದ ಆತಿಥ್ಯದಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಸ್ಪರ್ಧೆ ಮಾಡಲಿದೆ ಎಂದು ಪಾಕಿಸ್ತಾನ ಹಾಕಿ ಸಂಸ್ಥೆ (ಪಿಎಚ್​ಎಫ್) ಕಾರ್ಯದರ್ಶಿ ಹಾಗೂ ಮಾಜಿ ನಾಯಕ ಶಹಬಾಜ್ ಅಹ್ಮದ್ ಖಚಿತಪಡಿಸಿದ್ದಾರೆ.

ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಪಿಎಚ್​ಎಫ್, ಮುಂದಿನ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಸ್ಪರ್ಧೆ ಮಾಡುವುದು ಅನುಮಾನ ಎಂದು ಇದಕ್ಕೂ ಮುನ್ನ ವರದಿಯಾಗಿತ್ತು. ನವೆಂಬರ್ 28 ರಿಂದ ಡಿಸೆಂಬರ್ 16ರವರೆಗೆ ಒಡಿಶಾದ ಭುವನೇಶ್ವರದಲ್ಲಿ ನಡೆಯಲಿರುವ 14ನೇ ಆವೃತ್ತಿಯ ವಿಶ್ವಕಪ್​ನಲ್ಲಿ ಪಾಕ್ ಸ್ಪರ್ಧೆ ಮಾಡುವುದು ಖಚಿತ ಎಂದು ವಿಶ್ವ ಹಾಕಿ ಸಂಸ್ಥೆ (ಎಫ್​ಐಎಚ್) ಅಧ್ಯಕ್ಷ ನರೀಂದರ್ ಬಾತ್ರಾ ಕೂಡ ತಿಳಿಸಿದ್ದಾರೆ.

ಮತ್ತೆ ಹುಲ್ಲಿನ ಮೈದಾನಕ್ಕೆ ಹಾಕಿ!

ನವದೆಹಲಿ: ಹುಲ್ಲುಹಾಸಿನ ಮೈದಾನದಲ್ಲಿ ಶುರುವಾದ ಹಾಕಿ ಆಟ 1970ರ ದಶಕದಲ್ಲಿ ಆಸ್ಟ್ರೋಟರ್ಫ್ ಮೈದಾನಕ್ಕೆ ಬದಲಾಯಿತು. ಇದೀಗ ಹಾಕಿ ಆಟ ಮತ್ತೆ ಹುಲ್ಲಿನ ಮೈದಾನಕ್ಕೆ ಬರಲು ಸಜ್ಜಾಗಿದೆ. ಸುಲಭವಾಗಿ ಎಲ್ಲೆಡೆ ತಲುಪುವ ಮೂಲಕ ಆಟದ ವ್ಯಾಪ್ತಿಯನ್ನು ಇನ್ನಷ್ಟು ವೃದ್ಧಿಸುವ ಸಲುವಾಗಿ 44 ವರ್ಷಗಳ ಬಳಿಕ ಮತ್ತೆ ಸ್ವಾಭಾವಿಕ ಹುಲ್ಲುಹಾಸಿನ ಮೈದಾನದಲ್ಲಿ ಹಾಕಿ ಪಂದ್ಯಗಳನ್ನು ಆಯೋಜಿಸಲು ಅಂತಾರಾಷ್ಟ್ರೀಯ ಹಾಕಿ ಒಕ್ಕೂಟ (ಎಫ್​ಐಎಚ್) ನಿರ್ಧರಿಸಿದೆ.

1976ರಿಂದ ಎಲ್ಲ ಅಂತಾರಾಷ್ಟ್ರೀಯ ಹಾಕಿ ಪಂದ್ಯಗಳು ಟರ್ಫ್ ಮೈದಾನದಲ್ಲೇ ನಡೆಯುತ್ತಿವೆ. ದ್ವಿತೀಯ ದರ್ಜೆ ತಂಡಗಳು ಆಡುವ 2021ರ ಹಾಕಿ ಸಿರೀಸ್ ಓಪನ್​ನಿಂದ ಹುಲ್ಲಿನ ಮೈದಾನದಲ್ಲಿ ಪಂದ್ಯಗಳನ್ನು ಆಡಿಸಲು ಮುಂದಾಗಿರುವ ಎಫ್​ಐಎಚ್, 2024ರ ಒಲಿಂಪಿಕ್ಸ್ ಅರ್ಹತಾ ಟೂರ್ನಿಗಳಲ್ಲೂ ಇದನ್ನು ಅಳವಡಿಸಿಕೊಳ್ಳಲಿದೆ. ಸದ್ಯ ಟರ್ಫ್ ಮೈದಾನ ಇಲ್ಲದ ಕಾರಣ ಹೆಚ್ಚಿನ ದೇಶಗಳು ಹಾಕಿ ಆಡುತ್ತಿಲ್ಲ. ಟರ್ಫ್ ಅಳವಡಿಕೆ ಮತ್ತು ಈ ಮೈದಾನಗಳ ಸಂರಕ್ಷಣೆ ಕೂಡ ದುಬಾರಿ ಎನಿಸಿದೆ. ಆದರೆ ಹುಲ್ಲುಹಾಸಿನಲ್ಲೂ ಪಂದ್ಯ ಆಯೋಜಿಸಲು ಒಪ್ಪಿದರೆ ಇನ್ನಷ್ಟು ದೇಶಗಳು ಹಾಕಿ ಆಡಲು ಮುಂದೆ ಬರುವ ನಿರೀಕ್ಷೆಯನ್ನು ಎಫ್​ಐಎಚ್ ಹೊಂದಿದೆ.