ಭಾರತದಲ್ಲಿ ಎಫ್‌–16 ಯುದ್ಧ ವಿಮಾನ ತಯಾರಿಕಾ ಘಟಕ ಸ್ಥಾಪನೆ

0
41

‘ಮೇಕ್‌ ಇನ್‌ ಇಂಡಿಯಾ’ ಯೋಜನೆಯ ಭಾಗವಾಗಿ ಎಫ್‌–16 ಜೆಟ್‌ ವಿಮಾನ ತಯಾರಿಕಾ ಘಟಕವನ್ನು ಭಾರತದಲ್ಲಿ ಸ್ಥಾಪಿಸಲು ಅಮೆರಿಕದ ವೈಮಾನಿಕ ಮತ್ತು ರಕ್ಷಣಾ ಕಂಪನಿ ‘ಲಾಕ್‌ಹೀಡ್‌ ಮಾರ್ಟಿನ್‌’ ಮುಂದಾಗಿದೆ.

ಭಾರತ ನಿರಂತರವಾಗಿ ಜೆಟ್‌ ಯುದ್ಧ ವಿಮಾನಗಳನ್ನು ಕೊಂಡುಕೊಳ್ಳುತ್ತಿರುವುದರಿಂದ, ಪೂರ್ಣ ಪ್ರಮಾಣದಲ್ಲಿ ವಿಮಾನ ತಯಾರಿಕಾ ಘಟಕವನ್ನು ಭಾರತದಲ್ಲಿ ಆರಂಭಿಸುವುದಾಗಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಜೆಟ್‌ ವಿಮಾನಗಳ ತಯಾರಿಕಾ ಕ್ಷೇತ್ರದಲ್ಲಿಯೇ ಇದೊಂದು ಹೊಸ ಹೆಜ್ಜೆ, ಈ ಹಿಂದೆ ಯಾವ ಸಂಸ್ಥೆಯೂ ಈ ರೀತಿಯ ನಿರ್ಧಾರ ಕೈಗೊಂಡಿಲ್ಲ ಎಂದು ಕಂಪನಿಯ ಉಪಾಧ್ಯಕ್ಷ ವಿವೇಕ್‌ ಲಾಲ್‌ ಅಭಿಪ್ರಾಯಪಟ್ಟಿದ್ದಾರೆ.

‘ವಿಮಾನ ತಯಾರಿಕಾ ಘಟಕ ಸ್ಥಾಪನೆಯಿಂದ ಭಾರತೀಯ ಕೈಗಾರಿಕಾ ವಲಯಕ್ಕೆ ಹೊಸ ಅವಕಾಶಗಳು ದೊರೆಯಲಿವೆ. ಭಾರತವು ವಿಶ್ವದ ದೊಡ್ಡ ವಿಮಾನ ತಯಾರಿಕಾ ದೇಶವಾಗಲಿದ್ದು ರಕ್ಷಣಾ ಕ್ಷೇತ್ರಕ್ಕೆ ಹೆಚ್ಚು ಉಪಯೋಗವಾಗಲಿದೆ. ಅಗ್ಗದ ದರದಲ್ಲಿ ಯುದ್ಧ ವಿಮಾನಗಳು ದೊರೆಯಲಿವೆ ಎಂದು ತಿಳಿಸಿದ್ದಾರೆ.

ಎಫ್‌–22 ಹಾಗೂ ಎಫ್‌–35 ಮಾದರಿಯ ಜೆಟ್‌ ವಿಮಾನಗಳಿಗಿಂತ ಎಫ್‌–16 ಯುದ್ಧ ವಿಮಾನಗಳು ಬಲಶಾಲಿಯಾಗಿದ್ದು. ಅಮೆರಿಕ ವಾಯುಪಡೆಯಲ್ಲಿ ಪ್ರಮುಖ ಸ್ಥಾನ ಪಡೆದಿವೆ ಎಂದು ಅವರು ಹೇಳಿದ್ದಾರೆ.