ಭಾರತಕ್ಕೆ ವಿಶ್ವಮಟ್ಟದ ಟೂರ್ನಿಗಳ ಆತಿಥ್ಯದ ಅವಕಾಶಗಳಿಗೆ ತಾತ್ಕಾಲಿಕ ನಿರ್ಬಂಧ: ಐಒಸಿ ನಿರ್ಧಾರ

0
577

ರಾಷ್ಟ್ರರಾಜಧಾನಿಯಲ್ಲಿ ನಡೆಯುತ್ತಿರುವ ಶೂಟಿಂಗ್​ ವಿಶ್ವಕಪ್​ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ ಸ್ಪರ್ಧಿಗಳಿಬ್ಬರಿಗೆ ವೀಸಾ ನಿರಾಕರಿಸಿದ್ದಕ್ಕೆ ಅಸಮಾಧಾನಗೊಂಡಿರುವ ಅಂತರಾಷ್ಟ್ರೀಯ ಒಲಿಂಪಿಕ್​ ಸಮಿತಿ (ಐಒಸಿ) ಭಾರತಕ್ಕೆ ವಿಶ್ವಮಟ್ಟದ ಟೂರ್ನಿಗಳ ಆತಿಥ್ಯದ ಅವಕಾಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ನಿರ್ಧರಿಸಿದೆ.

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ನಡೆಯುತ್ತಿರುವ ಶೂಟಿಂಗ್​ ವಿಶ್ವಕಪ್​ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ ಸ್ಪರ್ಧಿಗಳಿಬ್ಬರಿಗೆ ವೀಸಾ ನಿರಾಕರಿಸಿದ್ದಕ್ಕೆ ಅಸಮಾಧಾನಗೊಂಡಿರುವ ಅಂತರಾಷ್ಟ್ರೀಯ ಒಲಿಂಪಿಕ್​ ಸಮಿತಿ (ಐಒಸಿ) ಭಾರತಕ್ಕೆ ವಿಶ್ವಮಟ್ಟದ ಟೂರ್ನಿಗಳ ಆತಿಥ್ಯದ ಅವಕಾಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ನಿರ್ಧರಿಸಿದೆ.

ಪುಲ್ವಾಮಾ ಉಗ್ರನ ದಾಳಿ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕ್​ ಬಿಕ್ಕಟ್ಟು ಉಂಟಾಗಿದ್ದು, ವಿಶ್ವಕಪ್​ ಶೂಟಿಂಗ್​ ಸ್ಪರ್ಧೆಗಳಲ್ಲಿ ಭಾಗವಹಿಸಲು ಪಾಕ್​ ಮೂಲದ ಶೂಟರ್​ಗಳಿಗೆ ಭಾರತ ವೀಸಾ ನಿರಾಕರಿಸಿತ್ತು. ಜತೆಗೆ, ಶೂಟಿಂಗ್​ ವಿಶ್ವಕಪ್​ನ ಪುರುಷ ವಿಭಾಗದ 25 ಮೀಟರ್​ ರ‍್ಯಾಪಿಡ್​ ಫೈರ್​ ಸ್ಪರ್ಧೆಯ ಒಲಿಂಪಿಕ್​ ಅರ್ಹತಾ ಸ್ಥಾನಮಾನವನ್ನೂ ಸಮಿತಿ ಹಿಂಪಡೆದುಕೊಂಡಿದೆ.

ಭಾರತವು ತಾರತಮ್ಯ ನೀತಿ ಅನುಸರಿಸುತ್ತಿರುವುದು ಹಾಗೂ ರಾಜಕೀಯ ಹಸ್ತಕ್ಷೇಪ ಮಾಡುತ್ತಿರುವುದು ಒಲಿಂಪಿಕ್​ ತತ್ವಗಳಿಗೆ ವಿರುದ್ಧವಾಗಿದೆ. ಮುಂದೆ ಈ ರೀತಿ ಆಗದಂತೆ ಸರ್ಕಾರ ಲಿಖಿತ ಭರವಸೆ ನೀಡುವವರೆಗೂ ಒಲಿಂಪಿಕ್​ ಸಂಬಂಧಿತ ಸ್ಪರ್ಧೆಗಳಿಗೆ ಆತಿಥ್ಯ ವಹಿಸಲು ಭಾರತಕ್ಕೆ ಅನುಮತಿ ನೀಡದಿರಲು ನಿರ್ಧರಿಸಲಾಗಿದೆ ಎಂದು ಐಒಸಿ ಹೇಳಿದೆ.(ಏಜೆನ್ಸೀಸ್​)