ಭಾರತಕ್ಕಾಗಿ ರಷ್ಯಾದಿಂದ ಕೆಎ 226 ಟಿ ಹೆಲಿಕಾಫ್ಟರ್ ವಿನ್ಯಾಸ

0
12

ಪ್ರಧಾನಿ ನರೇಂದ್ರ ಮೋದಿ ಅವರ ರಷ್ಯಾ ಪ್ರವಾಸ ಆರಂಭವಾದ ಬೆನ್ನಲ್ಲೇ ರಷ್ಯಾ ಮೂಲದ ಹೆಲಿಕಾಪ್ಟರ್ ತಯಾರಿಕಾ ಸಂಸ್ಥೆ ಭಾರತಕ್ಕಾಗಿ ವಿಶೇಷ ವಿನ್ಯಾಸದ ಹೆಲಿಕಾಪ್ಟರ್ ನಿರ್ಮಿಸುತ್ತಿರುವುದಾಗಿ ಹೇಳಿದೆ.

ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿ ಅವರ ರಷ್ಯಾ ಪ್ರವಾಸ ಆರಂಭವಾದ ಬೆನ್ನಲ್ಲೇ ರಷ್ಯಾ ಮೂಲದ ಹೆಲಿಕಾಪ್ಟರ್ ತಯಾರಿಕಾ ಸಂಸ್ಥೆ ಭಾರತಕ್ಕಾಗಿ ವಿಶೇಷ ವಿನ್ಯಾಸದ ಹೆಲಿಕಾಪ್ಟರ್ ನಿರ್ಮಿಸುತ್ತಿರುವುದಾಗಿ ಹೇಳಿದೆ.

ಜೆಎಸ್‌ಸಿ ರಷ್ಯಾ ಹೆಲಿಕಾಫ್ಟರ್ ಕಂಪೆನಿ ಭಾರತೀಯ ಸೇನಾಪಡೆಗಾಗಿ ಕೆಎ – 226 ಟಿ ಎಂಬ ವಿಶೇಷ ವಿನ್ಯಾಸದ ಹೆಲಿಕಾಫ್ಟರ್ ಅನ್ನು ಸಿದ್ಧಪಡಿಸಿದ್ದು, ಎಲ್ಲ ಹವಾಗುಣದಲ್ಲೂ ಕಾರ್ಯಾಚರಣೆ ಮಾಡಬಲ್ಲದಾಗಿದೆ ಎಂದು ಸಂಸ್ಥೆ ಹೇಳಿದೆ. ಇನ್ನು ಈ ವಿಶೇಷ ಹೆಲಿಕಾಪ್ಟರ್ ಮಾದರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ರಷ್ಯಾ ಪ್ರವಾಸದ ವೇಳೆ ಬಿಡುಗಡೆ ಮಾಡಲಾಗುತ್ತದೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಭಾರತೀಯ ಪರಿಸರಕ್ಕೆ ಹೊಂದುವಂತಹ ಚಿತ್ರ ಸಹಿತ ಗುರುತು ಮರೆಮಾಚಿರುವ ಸೇನಾಪಡೆ ವಿಮಾನದ ಮೇಲೆ ಮೇಕ್ ಇನ್ ಇಂಡಿಯಾ ಎಂಬ ಘೋಷ ಬರೆಯಲಾಗಿದ್ದು ರಷ್ಯಾ ದ್ವೀಪ ಪ್ರದೇಶದ ಬಯಲಿನಲ್ಲಿ ಪ್ರದರ್ಶನಕ್ಕಿಡಲಾಗಿದೆ.
 
ಕಳೆದ ಫೆಬ್ರವರಿಯಲ್ಲಿ 200 ಕೆಎ- 226 ಟಿ ಹೆಲಿಕಾಫ್ಟರ್ ಉತ್ಪಾದನೆಗೆ ಭಾರತ ಮತ್ತು ರಷ್ಯಾ ಒಪ್ಪಂದಕ್ಕೆ ಸಹಿ ಹಾಕಿದ್ದವು. ಮೇಕ್ ಇನ್ ಇಂಡಿಯಾ ಯೋಜನೆಯಡಿ ಭಾರತದ ನೆಲದಲ್ಲಿ ವಿದೇಶೀ ಯಂತ್ರಗಳ ಜೋಡಣೆಗೆ ಪ್ರೋತ್ಸಾಹವಿದ್ದು 140 ಹೆಲಿಕಾಫ್ಟರ್ ಗಳನ್ನು ಭಾರತದಲ್ಲಿ ಜೋಡಣೆ ಮಾಡಲಾದರೆ, ಮೊದಲ 60 ಕಾಪ್ಟರ್ ಗಳನ್ನು ರಷ್ಯಾದಲ್ಲೇ ಉತ್ಪಾದನೆ ಮಾಡಲಾಗುವುದು ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.