ಭಯೋತ್ಪಾದನೆ, ಏಡ್ಸ್‌ಗಿಂತ ವಾಯುಮಾಲಿನ್ಯವೇ ಅಪಾಯಕಾರಿ ! (4 ವರ್ಷ ಆಯಸ್ಸು ಕಳೆದುಕೊಳ್ಳುತ್ತಿರುವ ಭಾರತೀಯರು)

0
229

ಭಾರತದಲ್ಲಿ ಜನರ ಜೀವಿತಾವಧಿ ಮೇಲೆ ಧೂಮಪಾನ, ಭಯೋತ್ಪಾದನೆ, ಏಡ್ಸ್‌ಗಿಂತ ಹೆಚ್ಚು ದುಷ್ಪರಿಣಾಮ ವಾಯುಮಾಲಿನ್ಯದಿಂದ ಉಂಟಾಗುತ್ತಿದೆ ಎಂದು ಅಧ್ಯಯನವೊಂದು ಹೇಳಿದೆ. ಭಾರತವು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸದ ಕಾರಣ ಜನರ ಜೀವಿತಾವಧಿ 4.3 ವರ್ಷಗಳಷ್ಟು ಕಡಿಮೆಯಾಗಿದೆ ಎಂದೂ ಅದು ತಿಳಿಸಿದೆ.

ವಾಷಿಂಗ್ಟನ್‌ (ಪಿಟಿಐ): ಭಾರತದಲ್ಲಿ ಜನರ ಜೀವಿತಾವಧಿ ಮೇಲೆ ಧೂಮಪಾನ, ಭಯೋತ್ಪಾದನೆ, ಏಡ್ಸ್‌ಗಿಂತ ಹೆಚ್ಚು ದುಷ್ಪರಿಣಾಮ ವಾಯುಮಾಲಿನ್ಯದಿಂದ ಉಂಟಾಗುತ್ತಿದೆ ಎಂದು ಅಧ್ಯಯನವೊಂದು ಹೇಳಿದೆ. ಭಾರತವು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸದ ಕಾರಣ ಜನರ ಜೀವಿತಾವಧಿ 4.3 ವರ್ಷಗಳಷ್ಟು ಕಡಿಮೆಯಾಗಿದೆ ಎಂದೂ ಅದು ತಿಳಿಸಿದೆ. 

ಈಗ ಭಾರತೀಯರ ಸರಾಸರಿ ಜೀವಿತಾವಧಿ 69 ವರ್ಷವಿದೆ. ವಾಯುಮಾಲಿನ್ಯ ನಿಯಂತ್ರಿಸಿದ್ದರೆ ಈ ಅವಧಿ 73 ವರ್ಷ ಇರುತ್ತಿತ್ತು ಎಂದು ಸಂಶೋಧಕರು ಹೇಳಿದ್ದಾರೆ. ಅಮೆರಿಕದ ಷಿಕಾಗೊ ವಿಶ್ವವಿದ್ಯಾಲಯದ ಸಂಶೋಧಕರು ವಾಯು ಗುಣಮಟ್ಟ ಜೀವನ ಸೂಚ್ಯಂಕವನ್ನು (ಎಕ್ಯುಎಲ್‌ಐ) ಅಭಿವೃದ್ಧಿಪಡಿಸಿದ್ದಾರೆ.

‘ವಾಯುಮಾಲಿನ್ಯದಿಂದ ಜನರ ಮೇಲೆ ಯಾವ ರೀತಿಯ ಪರಿಣಾಮವಾಗುತ್ತಿದೆ ಎಂಬುದನ್ನು ನಾಗರಿಕರು ಮತ್ತು ನೀತಿ ನಿರೂಪಕರು ಅರಿತುಕೊಳ್ಳಬೇಕು. ಅಲ್ಲದೆ, ಮಾಲಿನ್ಯ ಪ್ರಮಾಣ ಕಡಿತಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಷಿಕಾಗೊ ವಿಶ್ವವಿದ್ಯಾಲಯದ ಪ್ರೊಫೆಸರ್‌ ಮೈಕಲ್‌ ಗ್ರೀನ್‌ಸ್ಟೋನ್‌ ಹೇಳಿದ್ದಾರೆ.
ವಿಶ್ವದೆಲ್ಲೆಡೆ ಜನ ಇಂದು ಕಲುಷಿತ ಗಾಳಿ ಸೇವಿಸುತ್ತಿದ್ದಾರೆ. ಇದರಿಂದ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದೆ. ಸಾಂಕ್ರಾಮಿಕ ರೋಗಗಳಿಗಿಂತಲೂ ಇದು ಭೀಕರ ಪರಿಣಾಮ ಬೀರುತ್ತದೆ 

ಮೈಕಲ್‌ ಗ್ರೀನ್‌ಸ್ಟೋನ್‌  ಚಿಕಾಗೊ ವಿಶ್ವವಿದ್ಯಾಲಯದ ಪ್ರೊಫೆಸರ್‌