ಭಜರಂಗ್​ಗೆ ವಿಶ್ವ ಕುಸ್ತಿ ಚಾಂಪಿಯನ್​ಷಿಪ್​ ನಲ್ಲಿ ಬೆಳ್ಳಿ ಪದಕ

0
578

ಭಾರತದ ಅಗ್ರ ಕುಸ್ತಿಪಟು ಭಜರಂಗ್ ಪೂನಿಯಾ ವಿಶ್ವ ಕುಸ್ತಿ ಚಾಂಪಿಯನ್​ಷಿಪ್​ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಎರಡು ಬಾರಿ ಪದಕ ಗೆದ್ದ ಭಾರತದ ಏಕೈಕ ರೆಸ್ಲರ್ ಎನ್ನುವ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇ

ಬುಡಾಪೆಸ್ಟ್(ಹಂಗೆರಿ): ಭಾರತದ ಅಗ್ರ ಕುಸ್ತಿಪಟು ಭಜರಂಗ್ ಪೂನಿಯಾ ವಿಶ್ವ ಕುಸ್ತಿ ಚಾಂಪಿಯನ್​ಷಿಪ್​ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಎರಡು ಬಾರಿ ಪದಕ ಗೆದ್ದ ಭಾರತದ ಏಕೈಕ ರೆಸ್ಲರ್ ಎನ್ನುವ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಇದಕ್ಕೂ ಮುನ್ನ 2013ರ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಪಾಪ್ ಲಾಸ್​ಜ್ಲೋ ಸ್ಪೋರ್ಟ್​ಅರೇನಾದಲ್ಲಿ ನಡೆಯುತ್ತಿರುವ ಕೂಟದಲ್ಲಿ, ವಿಶ್ವ ಕುಸ್ತಿಯಲ್ಲಿ ಸ್ವರ್ಣ ಪದಕ ಗೆದ್ದ ಭಾರತದ 2ನೇ ರೆಸ್ಲರ್ ಎನಿಸಿಕೊಳ್ಳುವ ಗುರಿಯಲ್ಲಿದ್ದ ಏಷ್ಯಾಡ್ ಕುಸ್ತಿ ಚಾಂಪಿಯನ್ ಭಜರಂಗ್​ಗೆ ಜಪಾನ್​ನ 19 ವರ್ಷದ ರೆಸ್ಲರ್ ತಕುಟು ಒಟಾಗುರೋ ಅಚ್ಚರಿ ನೀಡಿದರು. ಫೈನಲ್​ನಲ್ಲಿ ಭಜರಂಗ್ 16-9 ಅಂಕಗಳ ಅಂತರದಲ್ಲಿ ಸೋಲು ಕಂಡು ರಜತಕ್ಕೆ ತೃಪ್ತರಾದರು. 2010ರ ಮಾಸ್ಕೋ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಸುಶೀಲ್ ಕುಮಾರ್ ಇದೇ ವಿಭಾಗದಲ್ಲಿ ಸ್ವರ್ಣ ಪದಕ ಸಾಧನೆಮಾಡಿದ್ದರು. ಇದು ವಿಶ್ವ ಕುಸ್ತಿಯಲ್ಲಿ ಭಾರತ ಈವರೆಗೂ ಗೆದ್ದ ಏಕೈಕ ಸ್ವರ್ಣವೆನಿಸಿದೆ. -ಏಜೆನ್ಸೀಸ್