ಭಗತ್ ಸಿಂಗ್‌ಗೆ ‘ನಿಶಾನ್ ಎ ಹೈದರ್’ ಶೌರ್ಯ ಪ್ರಶಸ್ತಿ ನೀಡಿಲು ಆಗ್ರಹ

0
26

ಪಂಜಾಬ್ ಪ್ರಾಂತ್ಯದ ಭಗತ್ ಸಿಂಗ್ ಸ್ಮಾರಕ ಫೌಂಡೇಶನ್ ಪಾಕಿಸ್ತಾನದ ಅತ್ಯುನ್ನತ ‘ನಿಶಾನ್ ಎ ಹೈದರ್’ ಶೌರ್ಯ ಪ್ರಶಸ್ತಿಯನ್ನು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್‌ಗೆ ಮರಣೋತ್ತರವಾಗಿ ನೀಡಬೇಕೆಂದು ಪಾಕ್ ಸರ್ಕಾರವನ್ನು ಆಗ್ರಹಿಸಿದೆ.

ಶೌರ್ಯ ಪ್ರಶಸ್ತಿ ಜತೆಗೆ ಪಾಕಿಸ್ತಾನದ ಲಾಹೋರ್ ನ ಶಾಡ್ಮನ್ ಚೌಕ್ ಗೆ ಭಗತ್ ಸಿಂಗ್ ಎಂದು ಮರುನಾಮಕರಣ ಮಾಡಬೇಕೆಂದೂ ಫೌಂಡೇಶನ್ ಆಗ್ರಹಿಸಿದೆ. ಈ ಬಗ್ಗೆ ಅರ್ಜಿ ಸಲ್ಲಿಸಿರುವ ಫೌಂಡೇಶನ್ ಅದರಲ್ಲಿ ಪಾಕಿಸ್ತಾನದ ಜನಕ ಮೊಹಮ್ಮದ್ ಅಲಿ ಜಿನ್ನಾ ಅವರು ಭಗತ್ ಸಿಂಗ್ ಅವರಂಥ ಕೆಚ್ಚೆದೆಯ ದೇಶಪ್ರೇಮಿ ಮತ್ತೊಬ್ಬರಿಲ್ಲ ಎಂದಿರುವುದನ್ನು ಉಲ್ಲೇಶಿಸಿದೆ.
 
ಲಾಹೋರ್ ನ ಶಾಡ್ಮನ್ ಚೌಕ್ ಗೆ ಭಗತ್ ಸಿಂಗ್ ಚೌಕ್ ಎಂದು ಮರುನಾಮಕರಣ ಮಾಡಬೇಕೆಂಬ ಫೌಂಡೇಶನ್ ಆಗ್ರಹಕ್ಕೆ ಮುಂಬೈ ಭಯೋತ್ಪಾದನಾ ದಾಳಿಯ ರೂವಾರಿ ಹಫೀಜ್ ಸಯೀದ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾನೆ.