ಬ್ರೆಜಿಲ್ ಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿ, 11ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗಿ

0
22

ಎರಡು ದಿನಗಳ ಕಾಲ ನಡೆಯಲಿರುವ 11ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ನವೆಂಬರ್ 12 ರ ಮಂಗಳವಾರ ಬ್ರೆಜಿಲ್ ಗೆ ತೆರಳಿದ್ದಾರೆ.

ನವದೆಹಲಿ: ಎರಡು ದಿನಗಳ ಕಾಲ ನಡೆಯಲಿರುವ 11ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ನವೆಂಬರ್ 12 ರ ಮಂಗಳವಾರ ಬ್ರೆಜಿಲ್ ಗೆ ತೆರಳಿದ್ದಾರೆ.

ಬ್ರೆಜಿಲ್ ನಲ್ಲಿ ನವೆಂಬರ್ 13, 14ರಂದು ನಡೆಯಲಿರುವ 2 ದಿನಗಳ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತವೂ ಸೇರಿದಂತೆ ಬ್ರೆಜಿಲ್, ರಷ್ಯಾ, ಚೀನಾ ಮತ್ತು ದಕ್ಷಿಣಾ ಆಫ್ರಿಕಾ ಭಾಗವಹಿಸಲಿದೆ. ಜಾಗತಿಕ ಆರ್ಥಿಕ ಅಭಿವೃದ್ದಿಯ ವೇಗ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಮುಖ ಐದು ದೇಶಗಳು ಪಾಲ್ಗೊಳ್ಳುತ್ತಿವೆ ಎಂದು ವರದಿ ತಿಳಿಸಿದೆ.

ನವೆಂಬರ್ 13ರಂದು ಬೆಳಗ್ಗೆ ಪ್ರಧಾನಿ ಮೋದಿ ಬ್ರಸಿಲ್ಲಾಗೆ ಆಗಮಿಸಲಿದ್ದಾರೆ. ಮೊದಲ ದಿನ ಪ್ರಧಾನಿ ಮೋದಿ ಬ್ರೆಜಿಲ್ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಅಲ್ಲದೇ ಬ್ರಿಕ್ಸ್ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ವಿದೇಶಾಂಗ ಕಾರ್ಯದರ್ಶಿ ಟಿಎಸ್ ತ್ರಿಮೂರ್ತಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.

ಪ್ರಧಾನಿ ಜತೆ ಭಾರತದ ಉದ್ಯಮಿಗಳ ನಿಯೋಗ ಈ ಸಂದರ್ಭದಲ್ಲಿ ತೆರಳಿದ್ದಾರೆ. ಐದು ದೇಶಗಳ ಬ್ರಿಕ್ಸ್ ಉದ್ಯಮಿಗಳ ಸಮುದಾಯ ಕೂಡಾ ಶೃಂಗಸಭೆಯಲ್ಲಿ ಪ್ರತಿನಿಧಿಸಲಿದ್ದಾರೆ. ಭಯೋತ್ಪಾದನೆ ನಿಗ್ರಹ, ಬಂಡವಾಳ ಹೂಡಿಕೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಚರ್ಚೆ ನಡೆಯಲಿದೆ ಎಂದು ವರದಿ ತಿಳಿಸಿದೆ.