ಬ್ರೆಕ್ಸಿಟ್ ಒಪ್ಪಂದ: ಅಂಗೀಕರಿಸಿದ ಇ.ಯು

0
192

ಬ್ರಿಟನ್ ಪ್ರಧಾನಿ ತೆರೆಸಾ ಮೇ ಅವರೊಂದಿಗಿನ ಐತಿಹಾಸಿಕ ಬ್ರೆಕ್ಸಿಟ್ ಒಪ್ಪಂದಕ್ಕೆ ಐರೋಪ್ಯ ಒಕ್ಕೂಟ (ಇ.ಯು)
ನವೆಂಬರ್ 25 ರ ಭಾನುವಾರ ಸಮ್ಮತಿ ನೀಡಿದೆ.

ಸೆಲ್ಸ್‌ (ಎಎಫ್‌ಪಿ): ಬ್ರಿಟನ್ ಪ್ರಧಾನಿ ತೆರೆಸಾ ಮೇ ಅವರೊಂದಿಗಿನ ಐತಿಹಾಸಿಕ ಬ್ರೆಕ್ಸಿಟ್ ಒಪ್ಪಂದಕ್ಕೆ ಐರೋಪ್ಯ ಒಕ್ಕೂಟ (ಇ.ಯು) ನವೆಂಬರ್ 25 ರ ಭಾನುವಾರ ಸಮ್ಮತಿ ನೀಡಿದೆ. 

ಐರೋಪ್ಯ ಒಕ್ಕೂಟದ 27 ನಾಯಕರು ಕೇವಲ ಅರ್ಧ ಗಂಟೆಯಲ್ಲಿ ಬ್ರೆಕ್ಸಿಟ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಬ್ರೆಕ್ಸಿಟ್ ನಿಯಮಗಳ ಬಗ್ಗೆ 600 ಪುಟಗಳ ಒಪ್ಪಂದ ಹಾಗೂ ಭವಿಷ್ಯದ ಮುಕ್ತ ವ್ಯಾಪಾರ ಸಂಬಂಧ ಕುರಿತಾದ 26 ಪುಟಗಳ ಘೋಷಣೆಗೆ ನಾಯಕರು ಸಮ್ಮತಿ ಸೂಚಿಸಿರುವುದು ಪ್ರಧಾನಿ ಮೇಗೆ ಬಲಬಂದಂತಾಗಿದೆ. ಆ

ವಿಶೇಷ ಬ್ರಸೆಲ್ಸ್‌ ಸಮಾವೇಶದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಐರೋಪ್ಯ ಒಕ್ಕೂಟದಲ್ಲಿನ ನಾಲ್ಕು ದಶಕಗಳ ಬ್ರಿಟನ್‌ ಸದಸ್ಯತ್ವ ‘ದುರಂತ’ದಲ್ಲಿ ಅಂತ್ಯವಾಗಿರುವ ಕುರಿತು ನಾಯಕರು ದುಃಖ ವ್ಯಕ್ತಪಡಿಸಿದ್ದಾರೆ.

‘ಬ್ರಿಟನ್ ಹಾಗೂ ಯುರೋಪ್‌ಗೆ ಸಾಧ್ಯವಿದ್ದ ಹಾಗೂ ಅತ್ಯುತ್ತಮವಾದ ಆಯ್ಕೆ ಇದೊಂದೇ ಆಗಿತ್ತು’ ಎಂದು ಬ್ರಿಟನ್‌ನಲ್ಲಿ ಬಂಡಾಯವೆದ್ದಿರುವ ಸಂಸದರಿಗೆ ಇ.ಯು ಅಧ್ಯಕ್ಷ ಜೀನ್ ಕ್ಲಾಡ್ ಜಂಕರ್ ಅವರು ಇದೇ ವೇಳೆ ತಿಳಿಸಿದ್ದಾರೆ.