ಬ್ರಿಟನ್‌ ರಾಜಕುಮಾರ ಹ್ಯಾರಿ–ಮೇಘನ್‌ ಮದುವೆ

0
25

ಬ್ರಿಟನ್‌ ರಾಜಕುಮಾರ ಹ್ಯಾರಿ ಮತ್ತು ಅಮೆರಿಕದ ಕಿರುತೆರೆ ನಟಿ ಮೇಘನ್‌ ಮರ್ಕೆಲ್‌ 2018 ಮೇ 19 ರ ಶನಿವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ವಿಂಡ್ಸರ್‌, ಬ್ರಿಟನ್: ಬ್ರಿಟನ್‌ ರಾಜಕುಮಾರ ಹ್ಯಾರಿ ಮತ್ತು ಅಮೆರಿಕದ ಕಿರುತೆರೆ ನಟಿ ಮೇಘನ್‌ ಮರ್ಕೆಲ್‌ 2018 ಮೇ 19 ರ ಶನಿವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ವಿಂಡ್ಸರ್‌ ಕ್ಯಾಸಲ್‌ನ ಸೇಂಟ್‌ ಜಾರ್ಜ್‌ ಚಾಪೆಲ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಮೇಘನ್‌ ಮತ್ತು ಹ್ಯಾರಿ ಪರಸ್ಪರ ಕೈಹಿಡಿದುಕೊಂಡು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಕ್ಯಾಂಟರ್ಬರಿಯ ಆರ್ಚ್‌ ಬಿಷಪ್‌ ಜಸ್ಟಿನ್‌ ವೆಲ್ಬಿ ನೇತೃತ್ವ ವಹಿಸಿದ್ದರು.

36 ವರ್ಷದ ಮೇಘನ್‌ ಬಿಳಿ ಬಣ್ಣದ ಉಡುಪು ಧರಿಸಿದ್ದರು. ಕಪ್ಪು ಬಣ್ಣದ ಮಿಲಿಟರಿ ದಿರಿಸಿನಲ್ಲಿದ್ದ ಹ್ಯಾರಿ ಸಹೋದರನೊಂದಿಗೆ ಚರ್ಚ್‌ಗೆ ಬಂದಾಗ ನೆರೆದಿದ್ದ ಸಾವಿರಾರು ಮಂದಿ ಹಿತೈಷಿಗಳು ಶುಭ ಹಾರೈಸಿದರು.

ಮರ್ಕೆಲ್‌ ಧರಿಸಿದ ಉಂಗುರವನ್ನು ವೇಲ್ಸ್‌ನ ಚಿನ್ನದಿಂದ ತಯಾರಿಸಲಾಗಿತ್ತು. ಹ್ಯಾರಿ ಪ್ಲಾಟಿನಂ ಉಂಗುರ ಧರಿಸಿದ್ದರು.

ಮೇಘನ್‌ ತಾಯಿ ಡಾರಿಯಾ ರಾಗ್‌ಲ್ಯಾಂಡ್‌, ಹ್ಯಾರಿಯ 92 ವರ್ಷದ ಅಜ್ಜಿ  ರಾಣಿ ಎರಡನೇ ಎಲಿಜಬೆತ್‌, ಅಜ್ಜ  ಫಿಲಿಪ್‌ ಉಪಸ್ಥಿತರಿದ್ದರು. ಆರೋಗ್ಯ ಸಮಸ್ಯೆಯ ಕಾರಣದಿಂದ ಮೇಘನ್‌ ತಂದೆ ಥಾಮಸ್‌ ಮರ್ಕೆಲ್‌ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿರಲಿಲ್ಲ.

ಸಿಹಿ ಹಂಚಿದ ಡಬ್ಬಾವಾಲಗಳು (ಮುಂಬೈ ವರದಿ) : ರಾಜಕುಮಾರ ಹ್ಯಾರಿ–ಮೇಘನ್‌ ಮದುವೆಯ ಅಂಗವಾಗಿ ಮುಂಬೈನ ಡಬ್ಬಾವಾಲಗಳು ಶನಿವಾರ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ರೋಗಿಗಳ ಸಂಬಂಧಿಕರಿಗೆ ಸಿಹಿ ಹಂಚಿದ್ದಾರೆ.

2003ರಲ್ಲಿ ಭಾರತಕ್ಕೆ ಮೊದಲ ಬಾರಿ ಭೇಟಿ ನೀಡಿದ್ದ ಹ್ಯಾರಿ ಡಬ್ಬಾವಾಲಗಳನ್ನು ಭೇಟಿಯಾಗಿ ಅವರ ಕೆಲಸವನ್ನು ಪ್ರಶಂಸಿಸಿದ್ದರು.