ಬ್ಯಾಡ್ಮಿಂಟನ್‌ ತಂಡಕ್ಕೆ ಚೆಕ್‌ ವಿತರಣೆ

0
14

ಗೋಲ್ಡ್‌ ಕೋಸ್ಟ್‌ ನಲ್ಲಿ ಇತ್ತೀಚೆಗೆ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಅಮೋಘ ಸಾಧನೆ ಮಾಡಿದ್ದ ಬ್ಯಾಡ್ಮಿಂಟನ್‌ ತಂಡದ ಕ್ರೀಡಾಪಟುಗಳಿಗೆ ಭಾರತದ ಬ್ಯಾಡ್ಮಿಂಟನ್‌ ಸಂಸ್ಥೆಯು ಒಟ್ಟು ₹1.3 ಕೋಟಿ ಮೊತ್ತದ ಚೆಕ್‌ ವಿತರಿಸಿತು.

ನವದೆಹಲಿ: ಗೋಲ್ಡ್‌ ಕೋಸ್ಟ್‌ ನಲ್ಲಿ ಇತ್ತೀಚೆಗೆ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಅಮೋಘ ಸಾಧನೆ ಮಾಡಿದ್ದ ಬ್ಯಾಡ್ಮಿಂಟನ್‌ ತಂಡದ ಕ್ರೀಡಾಪಟುಗಳಿಗೆ ಭಾರತದ ಬ್ಯಾಡ್ಮಿಂಟನ್‌ ಸಂಸ್ಥೆಯು ಒಟ್ಟು  1.3 ಕೋಟಿ ಮೊತ್ತದ ಚೆಕ್‌ ವಿತರಿಸಿತು.

2018 ಮೇ 5 ರ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತ ಬ್ಯಾಡ್ಮಿಂಟನ್‌ ಸಂಸ್ಥೆಯ ಅಧ್ಯಕ್ಷ ಡಾ. ಶರ್ಮಾ ಅವರು ‘ಕಾಮನ್‌ವೆಲ್ತ್‌ನಲ್ಲಿ ಅನನ್ಯ ಸಾಮರ್ಥ್ಯ ತೋರಿ ದೇಶಕ್ಕೆ ಕೀರ್ತಿ ತಂಡ ಕ್ರೀಡಾಪಟುಗಳಿಗೆ ಸನ್ಮಾನ ಮಾಡಲು ಹೆಮ್ಮೆಯೆನಿಸುತ್ತದೆ’ ಎಂದು ಹೇಳಿದರು.

ಈ ಮೊತ್ತದಲ್ಲಿ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಚಿನ್ನ ಗೆದ್ದ ಸೈನಾ ನೆಹ್ವಾಲ್‌ ಅವರಿಗೆ 20 ಲಕ್ಷ ಹಾಗೂ ಬೆಳ್ಳಿ ಪದಕ ಜಯಿಸಿದ್ದ ಪಿ. ವಿ. ಸಿಂಧು ಅವರಿಗೆ 10 ಲಕ್ಷ ನೀಡಲಾಗಿದೆ.