ಬ್ಯಾಂಕ್ ಗ್ರಾಹಕರಿಗೆ ಸಿಹಿಸುದ್ದಿ! 2020ರಿಂದ NEFT ವಹಿವಾಟು ಶುಲ್ಕಕ್ಕೆ ಬ್ರೇಕ್

0
11

ಬ್ಯಾಂಕ್ ಗ್ರಾಹಕರಿಗೆ ಸಿಹಿಸುದ್ದಿ! ನೀವು ಎನ್.ಎ.ಎಫ್.ಟಿ.(NEFT) ವಹಿವಾಟು ನಡೆಸುವುರಾದರೆ ಜನವರಿ 2020 ರಿಂದ, ಯಾವುದೇ ಶುಲ್ಕಗಳಿರುವುದಿಲ್ಲ. ಡಿಜಿಟಲ್ ಪಾವತಿಯನ್ನು ಉತ್ತೇಜಿಸುವ ಗುರಿಯೊಡನೆ ಸರ್ಕಾರ ಈ ವಿನೂತನ ಉಪಕ್ರಮಕ್ಕೆ ಮುಂದಾಗಿದೆ.

ಬ್ಯಾಂಕ್ ಗ್ರಾಹಕರಿಗೆ ಸಿಹಿಸುದ್ದಿ! ನೀವು ಎನ್.ಎ.ಎಫ್.ಟಿ.(NEFT) ವಹಿವಾಟು ನಡೆಸುವುರಾದರೆ ಜನವರಿ 2020 ರಿಂದ, ಯಾವುದೇ ಶುಲ್ಕಗಳಿರುವುದಿಲ್ಲ. ಡಿಜಿಟಲ್ ಪಾವತಿಯನ್ನು ಉತ್ತೇಜಿಸುವ ಗುರಿಯೊಡನೆ ಸರ್ಕಾರ ಈ ವಿನೂತನ ಉಪಕ್ರಮಕ್ಕೆ ಮುಂದಾಗಿದೆ.

ಆನ್‌ಲೈನ್ ಎನ್.ಎ.ಎಫ್.ಟಿವಹಿವಾಟಿಗೆ ಉಳಿತಾಯ ಬ್ಯಾಂಕ್ ಖಾತೆ ಗ್ರಾಹಕರಿಗೆ ಶುಲ್ಕ ವಿಧಿಸದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ.

ನ್ಯಾಷನಲ್ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಎನ್‌ಇಟಿಸಿ) ಫಾಸ್ಟ್‌ಟ್ಯಾಗ್‌ಗಳೊಂದಿಗೆ ಸಂಪರ್ಕ ಹೊಂದಲು ಎಲ್ಲಾ ಅಧಿಕೃತ ಪಾವತಿ ವ್ಯವಸ್ಥೆ ಹಾಗೂ  ಸಾಧನಗಳಿಗೆ (ಬ್ಯಾಂಕೇತರ ಪಿಪಿಐಗಳು, ಕಾರ್ಡ್‌ಗಳು ಮತ್ತು ಯುಪಿಐ) ಅನುಮತಿ ನೀಡಲು ಕೇಂದ್ರ ಬ್ಯಾಂಕ್ ಪ್ರಸ್ತಾಪ ಮಾಡಿದೆ. ಪಾರ್ಕಿಂಗ್, ಇಂಧನ ಇತ್ಯಾದಿ ಪಾವತಿಗಳಿಗೆ ಫಾಸ್ಟ್‌ಟ್ಯಾಗ್‌ಗಳನ್ನು ಪರಸ್ಪರ ಕಾರ್ಯಸಾಧ್ಯವಾದ ವಾತಾವರಣದಲ್ಲಿ ಬಳಸಲು ಇದು ಅನುಕೂಲವಾಗಲಿದೆ” ಎಂದು ಆರ್‌ಬಿಐಹೇಳಿಕೆಯಲ್ಲಿ ತಿಳಿಸಿದೆ.

ಭಾರತದಲ್ಲಿ ಡಿಜಿಟಲ್ ಪಾವತಿಗಳ ಬೆಳವಣಿಗೆಯನ್ನು ಎತ್ತಿ ತೋರಿಸಿದ ರಿಸರ್ವ್ ಬ್ಯಾಂಕ್ “ಡಿಜಿಟಲ್ ಪಾವತಿಗಳು ಅಕ್ಟೋಬರ್ 2018 ರಿಂದ ಸೆಪ್ಟೆಂಬರ್ 2019 ರ ಅವಧಿಯಲ್ಲಿ ಒಟ್ಟು ನಗದು ರಹಿತ ಚಿಲ್ಲರೆ ಪಾವತಿಗಳಲ್ಲಿ ಶೇ.96ರಷ್ಟು ಪಾಲು ಹೊಂದಿದೆ. ಇದೇ ಅವಧಿಯಲ್ಲಿ ಎನ್.ಎ.ಎಫ್.ಟಿಹಾಗೂ ಯುಪಿಐ ವಹಿವಾಟಿನ ಮೂಲಕ 252 ಕೋಟಿ ಮತ್ತು 874 ಕೋಟಿ  ವಹಿವಾಟು ನಡೆದಿದೆ. ಇವುಗಳ ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಪ್ರಮಾಣ ಕ್ರಮವಾಗಿ ಶೇ. 20 ಹಾಗೂ ಶೇ. 26.3 ಆಗಿದೆ