ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಕಡ್ಡಾಯ: ಆರ್‌ಬಿಐ ಸ್ಪಷ್ಟನೆ

0
16

ಅಕ್ರಮ ಹಣ ವರ್ಗಾವಣೆ ತಡೆ ನಿಯಮಗಳ ಅಡಿಯಲ್ಲಿ ಬ್ಯಾಂಕ್‌ ಖಾತೆಯೊಂದಿಗೆ ಆಧಾರ್‌ ಜೋಡಣೆ ಕಡ್ಡಾಯ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಶನಿವಾರ ಸ್ಪಷ್ಟಪಡಿಸಿದೆ.

ಬ್ಯಾಂಕ್‌ ಖಾತೆಯೊಂದಿಗೆ ಆಧಾರ್‌ ಜೋಡಣೆ ಸಂಬಂಧ ಸಲ್ಲಿಕೆಯಾಗಿದ್ದ ಆರ್‌ಟಿಐ ಅರ್ಜಿ ಪ್ರಸ್ತಾಪಿಸಿ ಕೆಲ ವರದಿಗಳು ಪ್ರಕಟಗೊಂಡಿದ್ದವು. ಆಧಾರ್‌ ಜೋಡಣೆ ಕಡ್ಡಾಯವಲ್ಲ ಎಂದು ಸುದ್ದಿ ಹರಡಿತ್ತು.

2017ರ ಅಕ್ರಮ ಹಣ ವರ್ಗಾವಣೆ ತಡೆ ಎರಡನೇ ತಿದ್ದುಪಡಿ ನಿಯಮಗಳ ಪ್ರಕಾರ, ಆಧಾರ್‌ ಸಂಖ್ಯೆಯನ್ನು ಬ್ಯಾಂಕ್‌ ಖಾತೆಯೊಂದಿಗೆ ಸಂಪರ್ಕಿಸುವುದು ಕಡ್ಡಾಯ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಅಧಿಕೃತ ಗೆಜೆಟ್‌ನಲ್ಲಿ ಈ ಸಂಬಂಧಿತ ತಿದ್ದುಪಡಿ ನಿಯಮಗಳು 2017ರ ಜೂನ್‌ 1ರಂದು ಪ್ರಕಟಗೊಂಡಿದ್ದು, ಬ್ಯಾಂಕ್‌ಗಳು ಅದನ್ನು ಅವಶ್ಯವಾಗಿ ಕಾರ್ಯಗತಗೊಳಿಸಬೇಕಿದೆ. ಈವರೆಗೆ ಬ್ಯಾಂಕ್‌ ಖಾತೆ ಹಾಗೂ ಆಧಾರ್‌ ಜೋಡಣೆ ಸಂಬಂಧ ಆರ್‌ಬಿಐ ಬ್ಯಾಂಕ್‌ಗಳಿಗೆ ಪ್ರತ್ಯೇಕ ಸೂಚನೆ ಹೊರಡಿಸಿರಲಿಲ್ಲ.

ಬ್ಯಾಂಕ್‌ ಖಾತೆ ತೆರೆಯಲು ಹಾಗೂ ಈಗಾಗಲೇ ಇರುವ ಖಾತೆಗಳಿಗೆ ಆಧಾರ್‌ ಸಂಪರ್ಕಿಸುವುದನ್ನು ಜೂನ್‌ನಲ್ಲಿ ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿತ್ತು.