ಬ್ಯಾಂಕ್‌ಗೆ ವಂಚನೆ: ₹1,122 ಕೋಟಿ ಆಸ್ತಿ ಮುಟ್ಟುಗೋಲು

0
19

ಬ್ಯಾಂಕ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ವಡೋದರಾದ ಡಿಪಿಐಎಲ್‌ ಪ್ರೈ. ಲಿ. ಕಂಪನಿಗೆ ಸೇರಿದ ₹1,122 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ತಿಳಿಸಿದೆ.

ನವದೆಹಲಿ : ಬ್ಯಾಂಕ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ವಡೋದರಾದ ಡಿಪಿಐಎಲ್‌ ಪ್ರೈ. ಲಿ. ಕಂಪನಿಗೆ ಸೇರಿದ 1,122 ಕೋಟಿ ಮೌಲ್ಯದ ಆಸ್ತಿಯನ್ನು  ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ತಿಳಿಸಿದೆ. ಈ ಆಸ್ತಿಯಲ್ಲಿ ಪವನ ವಿದ್ಯುತ್‌ ಘಟಕ ಮತ್ತು ನಿರ್ಮಾಣ ಹಂತದಲ್ಲಿರುವ ಹೋಟೆಲ್‌ ಸೇರಿವೆ.

ಡಿಪಿಐಎಲ್‌ ಕಂಪನಿಯ ಮೇಲೆ ವಿವಿಧ ಬ್ಯಾಂಕುಗಳಿಗೆ 2,654 ಕೋಟಿ ವಂಚನೆ ಮಾಡಿದ ಆರೋಪ ಇದೆ.

ಈ ಕಂಪನಿ ಮತ್ತು ಅದರ ಪ್ರವರ್ತಕರ ವಿರುದ್ಧ ಸಿಬಿಐ ಕಳೆದ ತಿಂಗಳು ಎಫ್‌ಐಆರ್‌ ದಾಖಲಿಸಿತ್ತು. ಅದರ ಆಧಾರದಲ್ಲಿ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಇ.ಡಿ. ಪ್ರಕರಣ ದಾಖಲಿಸಿಕೊಂಡಿದೆ.

ಮತ್ತೊಂದು ಮುಟ್ಟುಗೋಲು: ಚೆನ್ನೈನ ಕನಿಷ್ಕ್‌ ಗೋಲ್ಡ್‌ ಪ್ರೈ. ಲಿ. ಕಂಪನಿಗೆ ಸೇರಿದ 48 ಕೋಟಿ ಮೌಲ್ಯದ ಆಸ್ತಿಯನ್ನು ಇ.ಡಿ. ಮುಟ್ಟುಗೋಲು ಹಾಕಿಕೊಂಡಿದೆ. ಬ್ಯಾಂಕುಗಳ ಗುಂಪಿಗೆ 824 ಕೋಟಿ ವಂಚನೆ ಮಾಡಿದ ಆರೋಪ ಈ ಕಂಪನಿಯ ಮೇಲಿದೆ.

ಭಾರತೀಯ ಸ್ಟೇಟ್‌ ಬ್ಯಾಂಕ್‌ ಈ ಹಗರಣದ ಬಗ್ಗೆ ಜನವರಿಯಲ್ಲಿ ಸಿಬಿಐಗೆ ಮಾಹಿತಿ ನೀಡಿತ್ತು. ಎರಡು ತಿಂಗಳ ಬಳಿಕ ಸಿಬಿಐ ದೂರು ದಾಖಲಿಸಿಕೊಂಡಿತ್ತು.