ದೇನಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ವಿಜಯ ಬ್ಯಾಂಕ್ಗಳ ವಿಲೀನ ಪ್ರಸ್ತಾವವನ್ನು ವಿರೋಧಿಸಿ ಡಿಸೆಂಬರ್ 26ರಂದು ದೇಶವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಬ್ಯಾಂಕ್ ಒಕ್ಕೂಟಗಳು ಎಚ್ಚರಿಕೆ ನೀಡಿವೆ.
ನವದೆಹಲಿ (ಪಿಟಿಐ): ದೇನಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ವಿಜಯ ಬ್ಯಾಂಕ್ಗಳ ವಿಲೀನ
ಪ್ರಸ್ತಾವವನ್ನು ವಿರೋಧಿಸಿ ಡಿಸೆಂಬರ್ 26ರಂದು ದೇಶವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಬ್ಯಾಂಕ್ ಒಕ್ಕೂಟಗಳು ಎಚ್ಚರಿಕೆ ನೀಡಿವೆ.
‘ಸರ್ಕಾರ ಮತ್ತು ಮೂರೂ ಬ್ಯಾಂಕ್ಗಳು ವಿಲೀನ ಪ್ರಕ್ರಿಯೆ ಮುಂದುವರಿಸಿವೆ. ಹೀಗಾಗಿ ಪ್ರತಿಭಟನೆಗೆ ಕರೆ ನೀಡಲು ನಿರ್ಧರಿಸಲಾಗಿದೆ’ ಎಂದು ಅಖಿಲ ಭಾರತ ಬ್ಯಾಂಕ್ ಸಿಬ್ಬಂದಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ತಿಳಿಸಿದ್ದಾರೆ.
ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯಡಿ (ಯುಎಫ್ಬಿಯು) ಬರುವ ಎಲ್ಲಾ ಒಕ್ಕೂಟಗಳೂ ಮುಷ್ಕರದಲ್ಲಿ ಭಾಗವಹಿಸಲಿವೆ ಎಂದು ಬ್ಯಾಂಕ್ ಕಾರ್ಮಿಕರ ಸಂಘಟೆಗಳ ಉಪಾಧ್ಯಕ್ಷ ಅಶ್ವನಿ ರಾಣಾ ತಿಳಿಸಿದ್ದಾರೆ.
ವಿಲೀನದ ಬಳಿಕ ದೇಶದ ಮೂರನೇ ಅತಿದೊಡ್ಡ ಬ್ಯಾಂಕ್ ಆಗಿ ಹೊರಹೊಮ್ಮಲಿದೆ.